ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | 'ಸೈಬರ್ ಜಾಲ: ವಂಚಕರ ಗಾಳ' ವರದಿಗೆ ಬಂದ ಪ್ರತಿಕ್ರಿಯೆಗಳು

Last Updated 11 ಸೆಪ್ಟೆಂಬರ್ 2022, 13:02 IST
ಅಕ್ಷರ ಗಾತ್ರ

‘ಸೈಬರ್ ಜಾಲ: ವಂಚಕರ ಗಾಳ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ಸೆಪ್ಟೆಂಬರ್ 11) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರ ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.

‘ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿ’

ರಾಜ್ಯದಲ್ಲಿ ಇತ್ತೀಚೆಗೆ ಸೈಬರ್ ವಂಚನೆಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ವಂಚನೆಗೆ ಒಳಗಾದ ಅಮಾಯಕರಿಗೆ ಪ್ರಕರಣ ದಾಖಲಿಸಿದ ನಂತರ ಸರಿಯಾಗಿ ನ್ಯಾಯವೇ ಸಿಗುತ್ತಿಲ್ಲ. ತಪ್ಪಿತಸ್ಥರನ್ನು ಬಂಧಿಸುವಲ್ಲಿ ಸೈಬರ್ ಪೊಲೀಸ್ ಇಲಾಖೆ ಹಿಂದೆ ಬಿದ್ದಿದೆ. ಸರ್ಕಾರ ಎಚ್ಚೆತ್ತು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ದತ್ತಾಂಶ ಕಳ್ಳತನ ಮಾಡದ ರೀತಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಬೇಕು.

- ಬೆಟ್ಟಪ್ಪ, ಗಂಗಾವತಿ

‘ಸೈಬರ್ ಮೋಸದ ಅರಿವು ಮೂಡಿಸಬೇಕು’

ಇತ್ತೀಚಿನ ದಿನಗಳಲ್ಲಿ ಸೈಬರ್ ಮೋಸಗಳಿಗೆ ಪ್ರತಿಯೊಬ್ಬರೂ ಯಾವುದೇ ಒಂದು ರೂಪದಲ್ಲಿ ಬಲಿಯಾಗುತ್ತಿದ್ದಾರೆ. ಸೈಬರ್ ಮೋಸದ ಕುರಿತು ಜನರಲ್ಲಿ ಜಾಗೃತಿ ಅವಶ್ಯಕವಾಗಿದೆ. ಜತೆಗೆ ಸೈಬರ್ ಪೊಲೀಸರ ಸಂಖ್ಯೆ ಮತ್ತು ಕಾರ್ಯದಕ್ಷತೆ ಹೆಚ್ಚಿಸಬೇಕು. ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಇದು ದೊಡ್ಡ ಸವಾಲಾಗಿ ಪರಿಣಮಿಸುವ ಮುನ್ನ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು.

- ಚಂದ್ರಶೇಖರ ಕಿತ್ತೂರು. ನರಗುಂದ

‘ಸೈಬರ್ ಪಡೆಯನ್ನು ಸದೃಢಗೊಳಿಸಿ’

ಸೈಬರ್ ವಂಚನೆಯ ವಿವಿಧ ರೀತಿಗಳ ಬಗ್ಗೆ ಸರಕಾರ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಸೈಬರ್ ವಿಭಾಗದ ಪೊಲೀಸ್‌ ಪಡೆಯನ್ನು ಸದೃಢಗೊಳಿಸಿ ಇಂತಹ ವಂಚನೆಯ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಲ್ಲರನ್ನೂ ಶಿಕ್ಷಿಸಬೇಕು. ಆಗ ಮಾತ್ರ ಸೈಬರ್ ವಂಚನೆಗಳನ್ನು ತಡೆಯಲು ಸಾಧ್ಯ.

- ಶ್ರೀಕಾಂತ ಭಂಡಾರಿ, ಕಲಬುರಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT