ಸೋಮವಾರ, ಆಗಸ್ಟ್ 8, 2022
24 °C

ರಾಜ್ಯಕ್ಕೆ ಹೆಚ್ಚುವರಿ 9,400 ವಯಲ್ಸ್‌ ಆ್ಯಂಪೊಟೆರಿಸಿನ್‌: ಸದಾನಂದ ಗೌಡ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಕರ್ನಾಟಕಕ್ಕೆ ಇಂದು ಹೆಚ್ಚುವರಿಯಾಗಿ 9,400 ವಯಲ್ಸ್‌ ಲಿಪೊಸೊಮಲ್‌ ಆ್ಯಂಪೊಟೆರಿಸಿನ್‌ ಲಸಿಕೆ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸೋಮವಾರ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಇಂದು ಹಂಚಿಕೆಯಾಗಿರುವ 9,400 ವಯಲ್ಸ್‌ ಸೇರಿ ಈವರೆಗೆ ರಾಜ್ಯಕ್ಕೆ ಒಟ್ಟು 49,870 ಬಾಟಲುಗಳನ್ನು ರಾಜ್ಯಕ್ಕೆ ನೀಡಲಾಗಿದೆ.

ಇದಲ್ಲದೆ, ಕನ್ವೆನ್ಷನಲ್‌ ಆಂಫೊಟೆರಿಸಿನ್ ಬಿ ಯ 4,680 ಬಾಟಲುಗಳನ್ನು ಸಹ ಇಂದು ಕರ್ನಾಟಕಕ್ಕೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಮೂಗು, ಕಣ್ಣು, ಕೆಲವೊಮ್ಮೆ ಮೆದುಳಿಗೆ ಹಾನಿ ಮಾಡುವ ಮ್ಯೂಕರ್‌ಮೈಕೊಸಿಸ್ (ಕಪ್ಪು ಶಿಲೀಂಧ್ರ) ಚಿಕಿತ್ಸೆಗೆ ಆ್ಯಂಪೊಟೆರಿಸಿನ್‌ ಬಳಸಲಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು