ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಜಸ್‌ನಲ್ಲಿ ಕೂರದಿದ್ದರೂ ಸಿಗಲಿದೆ ಹಾರಾಟದ ಅನುಭವ

Last Updated 4 ಫೆಬ್ರುವರಿ 2021, 20:03 IST
ಅಕ್ಷರ ಗಾತ್ರ

ಬೆಂಗಳೂರು: ಮಿಂಚಿನ ವೇಗದಲ್ಲಿ ಸಾಗುತ್ತಾ ಸಂಚಲನ ಮೂಡಿಸುವ ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವ ಅನುಭವ ಹೇಗಿರಬಲ್ಲುದು ಎಂಬ ಕುತೂಹಲ ವೈಮಾನಿಕ ಪ್ರದರ್ಶನ ವೀಕ್ಷಿಸಿದವರಲ್ಲಿರುವುದು ಸಹಜ. ಈ ಅನುಭವ ಪಡೆಯಬೇಕು ಎಂಬ ಕುತೂಹಲಿಗಳಿಗೆಲ್ಲರಿಗೂ ಸಂಸದ ತೇಜಸ್ವಿ ಸೂರ್ಯ ಅವರಂತೆ ತೇಜಸ್‌ ವಿಮಾನದಲ್ಲಿ ಸಾಗುವ ಅವಕಾಶ ಸಿಗದಿರಬಹುದು. ಆದರೂ ಇದೇ ತೆರನಾದ ‘ಹುಸಿ ಅನುಭವ’ವನ್ನು ದಕ್ಕಿಸಿಕೊಳ್ಳಬಹುದು.

ಯಲಹಂಕದ ವಾಯುನೆಲೆಯ ಆಗಸದಲ್ಲಿ ಸ್ವತಃ‌ ತೇಜಸ್‌ ಹಾರಾಟ ನಡೆಸಿದ ಅನುಭವವನ್ನು ವೈಮಾನಿಕ ಪ್ರದರ್ಶನದ ಡಿಆರ್‌ಡಿಒ ಮಳಿಗೆಯಲ್ಲಿರುವ ಸಿಮ್ಯುಲೇಟರ್ ಕಟ್ಟಿಕೊಡಲಿದೆ.

ಗಂಟೆಗೆ ಸಾವಿರ ಕಿಲೊಮೀಟರ್‌ಗೂ ಹೆಚ್ಚಿನ ವೇಗದಲ್ಲಿ ಸಾಗುತ್ತಾ, ಏಕಾಏಕಿ ಮುಗಿಲೆತ್ತರಕ್ಕೆ ಏರುತ್ತಾ, ನಂತರ ಧೊತ್ತೆಂದು ಕೆಳಕ್ಕೆ ಜಿಗಿಯುತ್ತಾ ಸಾಗುವಾಗ ದೇಹ ಹೇಗೆ ಪ್ರತಿಕ್ರಿಯಿಸುತ್ತದೆಯೋ ಅದೇ ಅನುಭವವನ್ನು ಈ ಸಿಮ್ಯುಲೇಟರ್‌ ಕೂಡಾ ನೀಡಲಿದೆ. ವೈಮಾನಿಕ ಪ್ರದರ್ಶನಕ್ಕೆ ಬರುವ ಯಾರು ಬೇಕಾದರೂ ಉಚಿತವಾಗಿ ಈ ಅನುಭವ ಪಡೆಯಬಹುದು.

ಎಡಿಎ ಹಾಗೂ ಡಿಒಆರ್‌ಡಿಒ ಅಭಿವೃದ್ಧಿಪಡಿಸುತ್ತಿರುವ ಸುಧಾರಿತ ಮಧ್ಯಮ ಯುದ್ಧ ವಿಮಾನ (ಎಎಂಸಿಎ) ಹಾರಿಸುವ ಅನುಭವ ಕಟ್ಟಿಕೊಡುವ ಸಿಮ್ಯುಲೇಟರ್‌ ಕೂಡಾ ಪ್ರದರ್ಶನ ಮಳಿಗೆಯಲ್ಲಿದೆ. ಆದರೆ, ಪೈಲಟ್‌ಗಳಿಗೆ, ರಾಜತಾಂತ್ರಿಕ ಅಧಿಕಾರಿಗಳಿಗೆ ಮಾತ್ರ ಈ ಸಿಮ್ಯುಲೇಟರ್‌ ಬಳಸಲು ಅವಕಾಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT