ಬೆಂಗಳೂರು:ಆಂಧ್ರಪ್ರದೇಶ ಸರಕಾರದ ಧಾರ್ಮಿಕ ದತ್ತಿ ಮಂತ್ರಿ ವೇಲಂಪಳ್ಳಿ ಶ್ರೀನಿವಾಸ ರಾವ್ ಸೋಮವಾರ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠಕ್ಕೆ ಆಗಮಿಸಿ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿ ಮಾಡಿದರು .

ಆಂಧ್ರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಸರಣಿ ಹಿಂದೂ ವಿರೋಧಿ ಕೃತ್ಯಗಳು , ದೇವಾಲಯ ಹಾಗೂ ಹಿಂದೂ ದೇವತೆಗಳ ವಿಗ್ರಹ ಭಗ್ನ ಮೊದಲಾದ ಪ್ರಕರಣಗಳ ಹಿನ್ನೆಲೆಯಲ್ಲಿ ಶ್ರೀಗಳು ಕಳೆದ ವಾರವಷ್ಟೆ ಹಾನಿಗೊಂಡ ಪ್ರದೇಶಗಳಿಗೆ ಭೇಟಿ ನೀಡಿ ಘಟನೆಗಳ ಕುರಿತಾಗಿ ಗಂಭೀರ ಕಳವಳ ವ್ಯಕ್ತಪಡಿಸಿದ್ದರು . ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರ ಸೂಚನೆಯಂತೆ ಶ್ರೀನಿವಾಸ ರಾವ್ ಶ್ರೀಗಳನ್ನು ಭೇಟಿ ಮಾಡಿದ್ದು ವಿಷಯಗಳ ಬಗ್ಗೆ ವಿಸ್ತೃತವಾಗಿ ಸಮಾಲೋಚನೆ ನಡೆಸಿದರು .

ಮಾತುಕತೆಯ ವೇಳೆ ಶ್ರೀಗಳು ಈ ಘಟನೆಗಳಿಗೆ ಕಿಡಿಗೇಡಿಗಳೋ ,ರಾಜಕೀಯ ವೈಷಮ್ಯವೋ ಅಥವಾ ಇನ್ನು ಯಾವುದೇ ಕಾರಣವಾದರೂ ಮುಂದೆ ಅದು ಮತೀಯ ಗಲಭೆಗೆ ತಿರುವು ಪಡೆದು ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಗೆ ಹಾಕಿ ಅಗುವ ಅಪಾಯವಿದೆ .
ಈಗ ಕೆಲವೇ ಪ್ರಕರಣಗಳಿಗೆ ಸಂಬಂಧಿಸಿ ಮಾತ್ರ ಅಪರಾಧಿಗಳನ್ನು ಪತ್ತೆಹಚ್ಚಲಾಗಿದೆ . ಉಳಿದ ಪ್ರಕರಣಗಳ ಬಗ್ಗೆಯೂ ಗಂಭೀರ ತನಿಖೆ ನಡೆಸಿ ಕಾನೂನು ರೀತ್ಯಾ ಶಿಕ್ಷೆ ವಿಧಿಸಬೇಕು .ರಾಜ್ಯದಲ್ಲಿ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆಯಾಗದಂತೆ ಎಚ್ಚರವಹಿಸಬೇಕು . ಈಗ ಆಕ್ರಮಣಕ್ಕೊಳಗಾದ ದೇಗುಲಗಳ ಪುನರ್ನಿರ್ಮಾಣವನ್ಬು ಸರಕಾರವೇ ಮಾಡಬೇಕು . ಯಾವುದೇ ದೇವಾಲಯಗಳಲ್ಲಿ ಹಿಂದೂ ವಿರೋಧಿ ಕೃತ್ಯಗಳಿಗೆ ಆಸ್ಪದ ನೀಡಬಾರದು . ದೇವಾಲಯಗಳಿಗೆ ಸಂಬಂಧಿಸಿದ ಸ್ಥಿರಾಸ್ತಿಗಳ ಸೂಕ್ತ ದಾಖಲೆ ಮಾಡಿಸಿ ಸಂರಕ್ಷಿಸಬೇಕು . ಸಾಧ್ಯವಾದಷ್ಟು ಆಯಾ ದೇಗುಲಗಳ ವ್ಯಾಪ್ತಿಯ ಸ್ಥಳೀಯರಿಗೇ ಅವುಗಳ ನಿರ್ವಹಣೆ ಜವಾಬ್ದಾರಿ ಕೊಡಬೇಕು . ಎಂಬ ಸಲಹೆಗಳನ್ನು ನೀಡಿದರು .

ಇದಕ್ಕುತ್ತರಿಸಿದ ಸಚಿವರು ಸದ್ಯಕ್ಕೆ ಪರಿಸ್ಥಿತಿಯನ್ನು ತಹಬಂದಿಗೆ ತರಲಾಗಿದ್ದು ಎಲ್ಲ ಪ್ರಕರಣಗಳ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದ್ದು ಅವರ ವಿರುದ್ಧ ಕಠಿಣ ಕಾನೂನುಕ್ರಮ ಜರುಗಿಸಲಾಗುವುದು . ಹಾನಿಗೊಂಡ ದೇವಾಲಯಗಳನ್ನು ಸರಕಾರವೇ ದುರಸ್ತಿಗೊಳಿಸುತ್ತದೆ ಮುಂದೆ ರಾಜ್ಯದ ಯಾವುದೇ ದೇವಾಲಯಗಳ ಮೇಲೆ ಇಂಥಹ ಆಕ್ರಮಣ ನಡೆಯಬಾರದು ಒಂದು ವೇಳೆ ನಡೆದರೂ ತಕ್ಷಣ ಆರೋಪಿಗಳನ್ನು ಪತ್ತೆ ಹಚ್ಚಲು ನೆರವಾಗುವಂತೆ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಯನ್ನು ( ಜಿಪಿಎಸ್) ಅಳವಡಿಸಲಾಗುವುದು .

ಇಂಥಹ ವಿಚಾರಗಳಲ್ಲಿ ಮುಂದೆ ಯಾವುದೇ ಸಂದೇಹಗಳಿದ್ದರೂ ನೇರವಾಗಿ ಸರಕಾರವನ್ನು ಸಂಪರ್ಕಿಸಬೇಕು ಎಂದು ಶ್ರೀಗಳಿಗೆ ತಿಳಿಸಿದರು . ಭಗ್ನಗೊಂಡ ದೇವಾಲಯಗಳಿಗೆ ದುರಸ್ತಿಯ ನಂತರ ಭೇಟಿ ಕೊಡಬೇಕೆಂದೂ ಶ್ರೀಗಳಲ್ಲಿ ಮನವಿ ಮಾಡಿದರು . ಈ ಸಂದರ್ಭ ಸರಕಾರದ ಅಧಿಕಾರಿಗಳು , ತಿರುಮಲ ತಿರುಪತಿ ದೇವಸ್ಥಾನದ ವಿಶ್ವಸ್ಥ ಹಾಗೂ ಶ್ರೀಗಳ ಆಪ್ತ ಡಿ ಪಿ ಅನಂತ್ ಉಪಸ್ಥಿತರಿದ್ದರು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.