ಕೋಲಾರ: ಆನಂದ್ ಸಿದ್ಧಾರ್ಥ ಅವರ ‘ಸ್ಯಾಮ್ ಆಡಿಯೊ’ ಸಂಸ್ಥೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಬರಹ ಹಾಗೂ ಭಾಷಣದ 22 ಸಂಪುಟಗಳನ್ನು ಆಡಿಯೊ ರೂಪದಲ್ಲಿ ಹೊರತರುತ್ತಿದೆ. ಫೆ.19ರಂದು ಮಾಲೂರಿನಲ್ಲಿ ಪ್ರಥಮ ಸಂಪುಟದ ಆಡಿಯೊ ಬಿಡುಗಡೆ ಮಾಡಲಾಗುತ್ತಿದೆ.
ಒಂದೊಂದು ಜಿಲ್ಲೆಯಲ್ಲಿ ಒಂದೊಂದು ಸಂಪುಟದ ಆಡಿಯೊ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ಉಪನ್ಯಾಸಕ ಮಂಜುನಾಥ್ ಆರ್.ಹುಣಸಿಕೋಟೆ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
'ದೇಶದಲ್ಲಿಯೇ ಪ್ರಥಮ ಬಾರಿ ಅಂಬೇಡ್ಕರ್ ಅವರ ಸಂಪೂರ್ಣ ಬರಹ–ಭಾಷಣಗಳನ್ನು ಆಡಿಯೊ ಬುಕ್ ರೂಪದಲ್ಲಿ ತರಲಾಗುತ್ತಿದೆ. ಎರಡು ವರ್ಷದ ಶ್ರಮ ಇದು. ಸುಮಾರು ₹75 ಲಕ್ಷ ಖರ್ಚಾಗಿದೆ. ಈ ಹಣವನ್ನು ಆನಂದ್ ಸಿದ್ಧಾರ್ಥ ಭರಿಸಿದ್ದಾರೆ’ ಎಂದು ತಿಳಿಸಿದರು.
ಮೊದಲ ಸಂಪುಟ 16.30 ಗಂಟೆ ಆಡಿಯೊ ಒಳಗೊಂಡಿದೆ. ಮೊಬೈಲ್‌ನಲ್ಲಿ ‘sam audio’s' ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡು ಕೇಳಬಹುದು. ಉದ್ಘಾಟನೆ ಬಳಿಕ ಆ್ಯಪ್ ಲಭ್ಯವಾಗಲಿದೆ ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.