ಮಂಗಳವಾರ, ಡಿಸೆಂಬರ್ 7, 2021
24 °C

ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಎಂಬ ಕಟೀಲ್ ಹೇಳಿಕೆ ಸರಿಯಲ್ಲ: ಬಿಎಸ್ ವೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಡ್ರಗ್ಸ್ ಪೆಡ್ಲರ್ ಎಂದಿರುವುದು ಸರಿಯಲ್ಲ. ಆ ರೀತಿ ಅಗೌರವದಿಂದ ಮಾತನಾಡಿರುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸಿಂದಗಿ ತಾಲ್ಲೂಕಿನ ಮೊರಟಗಿ ಯಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನಿಗೆ ಉತ್ತರಿಸಿದ ಅವರು,ಯಾರೂ 
ಯಾರ ಬಗ್ಗೆಯೂ ಈ ರೀತಿ ಅಗೌರವದಿಂದ ಮಾತನಾಡಬಾರದು ಎಂದರು. ರಾಹುಲ್ ಗಾಂಧಿ ಬಗ್ಗೆ ಗೌರವ ಇದೆ ಎಂದು ಹೇಳಿದರು.

ಎಚ್.ಡಿ.ಕುಮಾರ ಸ್ವಾಮಿ, ಸಿದ್ದರಾಮಯ್ಯ ಅವರು ಅನಗತ್ಯವಾಗಿ ಆರ್ ಎಸ್ ಎಸ್ ಅನ್ನು ಎಳೆದು ತರುವುದರಿಂದ ಅವರಿಗೆ  ಯಾವುದೇ ಲಾಭವಿಲ್ಲ ಎಂದರು.

ಇದನ್ನೂ ಓದಿ.. ರಾಹುಲ್‌ ಡ್ರಗ್‌ ವ್ಯಸನಿ, ಡ್ರಗ್‌ ಪೆಡ್ಲರ್‌ ಎಂದು ಮಾಧ್ಯಮಗಳಲ್ಲಿ ಬಂದಿದೆ: ನಳಿನ್

ಎಚ್.ಡಿ.ಕೆ ಮತ್ತು ಸಿದ್ದರಾಮಯ್ಯ ಅವರಿಗೆ ಜನ ಉಪಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು