ಬುಧವಾರ, ಮೇ 19, 2021
26 °C

ಸಂಸ್ಕೃತ ವಿವಿ: ಗೌರವ ಡಿ.ಲಿಟ್‌ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಂಸ್ಕೃತ ವಿಶ್ವವಿದ್ಯಾಲಯದ ‘ಗೌರವ ಡಿ.ಲಿಟ್‌’ ಪದವಿಯನ್ನು ಹಿರಿಯ ಸಂಸ್ಕೃತ ವಿದ್ವಾಂಸ ಪಂಡಿತ ಮಳಗಿ ಜಯತೀರ್ಥಾಚಾರ್ಯ ಅವರಿಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ ಪ್ರದಾನ ಮಾಡಿದರು.

ಗಾಯನ ಸಮಾಜದಲ್ಲಿ ಶನಿವಾರ ನಡೆದ ಸಂಸ್ಕೃತ ವಿಶ್ವವಿದ್ಯಾಲಯದ 8ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪಾಲ್ಗೊಂಡು ಅವರು, ಇನ್ನೋರ್ವ ಸಂಸ್ಕೃತ ಪಂಡಿತ ಎಸ್. ಕಣ್ಣನ್ ಅವರಿಗೆ ಡಿ. ಲಿಟ್, 30 ಮಂದಿಗೆ ಪಿಎಚ್. ಡಿ, 43 ಮಂದಿಗೆ ಎಂ.ಫಿಲ್‌ ಪದವಿ ಪ್ರದಾನ ಮಾಡಿದರು.

ಮಾತುಂಗಾದ ಮಾವುಲಿ ವಿದ್ಯಾಪೀಠದಲ್ಲಿ  ಶಾಸ್ತ್ರಗಳನ್ನು ಅಧ್ಯಯನ ಮಾಡಿರುವ ಪಂ. ಮಳಗಿ ಜಯತೀರ್ಥಾಚಾರ್ಯ, ಕರ್ನಾಟಕ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.

ಪಶ್ಚಿಮ ಬಂಗಾಳ ಬೇಲೂರಿನ ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಸ್ವಾಮಿ ಆತ್ಮಪ್ರಿಯಾನಂದ ಅವರು ಕೊಲ್ಕತಾದಿಂದಲೇ ವರ್ಚ್ಯುವಲ್‌ ಮೂಲಕ ಘಟಿಕೋತ್ಸವ ಭಾಷಣ ಮಾಡಿದರು..

ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕಾ.ಇ. ದೇವನಾಥನ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.  ಕುಲಸಚಿವ ಎಂ. ಕೊಟ್ರೇಶ್‌ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು