ಬೆಳಗಾವಿ/ಬೆಂಗಳೂರು: ಪಡಿತರ ಅಕ್ಕಿ ಕಡಿತಗೊಳಿಸಿದ್ದನ್ನು ಪ್ರಶ್ನಿಸಿದ ರೈತರೊಬ್ಬರಿಗೆ ‘ಸತ್ತು ಹೋದರೆ ಒಳ್ಳೆಯದು’ ಎಂದು ಆಹಾರ ಸಚಿವ ಉಮೇಶ ಕತ್ತಿ ನೀಡಿರುವ ಪ್ರತಿಕ್ರಿಯೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ತಾವು ಆಡಿದ ಮಾತುಗಳ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಚಿವ ಕತ್ತಿ ಬುಧವಾರ ಸಂಜೆ ಕ್ಷಮೆ ಕೋರಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕತ್ತಿಯವರನ್ನು ತರಾಟೆಗೆ ತೆಗೆದುಕೊಳ್ಳುವುದರ ಜತೆಗೆ, ಈ ಕುರಿತು ವಿಷಾದ ವ್ಯಕ್ತಪಡಿಸಿದರು. ‘ಗೋಧಿ ಬೇಡವಾದರೆ 5 ಕೆ.ಜಿ ಅಕ್ಕಿ ನೀಡಲು ಸಿದ್ಧ’ ಎಂದೂ ವಾಗ್ದಾನ ಮಾಡಿದರು.

ಕತ್ತಿ ಅವರನ್ನು ಸಚಿವ ಸ್ಥಾನದಿಂದ ಕಿತ್ತೊಗೆಯುವಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಆಗ್ರಹಿಸಿದರು.

ಆಗಿದ್ದೇನು?: ಗದಗ ಜಿಲ್ಲೆಯ ರೈತ ಸಂಘದ ಕಾರ್ಯಕರ್ತ ಈಶ್ವರ ಅವರು ಒಂದೆರಡು ದಿನಗಳ ಹಿಂದೆ ಸಚಿವರ ಮೊಬೈಲ್ ಫೋನ್‌ಗೆ ಕರೆ ಮಾಡಿ, ‘ಲಾಕ್‌ಡೌನ್ ಸಂದರ್ಭದಲ್ಲೂ ಕೇವಲ 2 ಕೆ.ಜಿ. ಅಕ್ಕಿ ಕೊಡುತ್ತಿದ್ದೀರಿ. ಇಷ್ಟು ಕಡಿಮೆ ಅಕ್ಕಿಯಲ್ಲಿ ನಾವು ಬದುಕುವುದಾದರೂ ಹೇಗೆ?’ ಎಂದು ಪ್ರಶ್ನಿಸಿದ್ದರು.

ಇದಕ್ಕೆ ಉತ್ತರಿಸಿದ ಸಚಿವರು, ‘2 ಕೆ.ಜಿ. ಅಕ್ಕಿ ಜೊತೆಗೆ 3 ಕೆ.ಜಿ. ರಾಗಿ ಕೊಡುತ್ತಿದ್ದೇವೆ. ಉತ್ತರ ಕರ್ನಾಟಕ ಭಾಗಕ್ಕೆ 3 ಕೆ.ಜಿ. ಜೋಳ ನೀಡುತ್ತಿದ್ದೇವೆ. ಒಟ್ಟು 5 ಕೆ.ಜಿ. ಪಡಿತರ ವಿತರಿಸಲಾಗುತ್ತಿದೆ’ ಎಂದರು. ‘ಹೀಗಾದರೆ ನಾವು ಉಪವಾಸ ಇರೋದಾ ಅಥವಾ ಸತ್ತು ಹೋಗೋದಾ’ ಎಂದು ರೈತ ಖಾರವಾಗಿ ಪ್ರಶ್ನಿಸಿದರು. ಸಿಟ್ಟಿಗೆದ್ದ ಕತ್ತಿ, ‘ಸತ್ತು ಹೋಗೋದು ಒಳಿತು’ ಎಂದು ಪ್ರತಿಕ್ರಿಯಿಸಿದರು.

ಇದಕ್ಕೆ ಉತ್ತರಿಸಿದ ಸಚಿವರು, ‘2 ಕೆ.ಜಿ. ಅಕ್ಕಿ ಜೊತೆಗೆ 3 ಕೆ.ಜಿ. ರಾಗಿ ಕೊಡುತ್ತಿದ್ದೇವೆ. ಉತ್ತರ ಕರ್ನಾಟಕ ಭಾಗಕ್ಕೆ 3 ಕೆ.ಜಿ. ಜೋಳ ನೀಡುತ್ತಿದ್ದೇವೆ. ಒಟ್ಟು 5 ಕೆ.ಜಿ. ಪಡಿತರ ವಿತರಿಸಲಾಗುತ್ತಿದೆ’ ಎಂದರು. ‘ಹೀಗಾದರೆ ನಾವು ಉಪವಾಸ ಇರೋದಾ ಅಥವಾ ಸತ್ತು ಹೋಗೋದಾ’ ಎಂದು ರೈತ ಖಾರವಾಗಿ ಪ್ರಶ್ನಿಸಿದ. ಸಿಟ್ಟಿಗೆದ್ದ ಕತ್ತಿ, ‘ಸತ್ತು ಹೋಗೋದು ಒಳಿತು’ ಎಂದು ಪ್ರತಿಕ್ರಿಯಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ‘ನಾನು ಯಾರೊಂದಿಗೂ ಆ ರೀತಿ ಮಾತನಾಡಿಯೇ ಇಲ್ಲ’ ಎಂದು ವಾದಿಸಿದರು. ಆ ಬಳಿಕ, ‘ಸತ್ತು ಹೋಗೋದಾ ಎಂದು ಕೇಳಿದವರಿಗೆ ಏನೆನ್ನುವುದು? ಸತ್ತು ಹೋದರೆ ಒಳ್ಳೆಯದು ಎಂದು ಆಡುಭಾಷೆಯಲ್ಲಿ ಹೇಳಿದ್ದೇನೆ. ಬದುಕು ಎಂದು ಹೇಳುವಷ್ಟು ದೊಡ್ಡ ಮನಸ್ಸು ನನಗಿಲ್ಲ. ರಾಜ್ಯದ ಪ್ರತಿಯೊಬ್ಬರೂ ಇದೇ ರೀತಿ ಕೇಳಿದರೆ ಎಷ್ಟು ಮಂದಿಗೆ ಉತ್ತರ ಕೊಡುವುದು?’ ಎಂದು ಸಮರ್ಥಿಸಿಕೊಂಡಿದ್ದರು.

ದೂರವಾಣಿ ಸಂಭಾಷಣೆ ವಿವರ
ವ್ಯಕ್ತಿ: 2.ಕೆ.ಜಿ. ಅಕ್ಕಿ ಮಾಡಿದ್ದೀರಲ್ಲಾ ಸಾಲುತ್ತಾ?
ಸಚಿವ: 3 ಕೆ.ಜಿ. ರಾಗಿ ಕೊಡ್ತಿದ್ದೀವಿ.

ವ್ಯಕ್ತಿ: ನಮ್ಮ ಉತ್ತರ ಕರ್ನಾಟಕ ಭಾಗಕ್ಕೆ ರಾಗಿ ಎಲ್ಲಿ ಕೊಡುತ್ತೀರಾ?
ಸಚಿವ: ಉತ್ತರ ಕರ್ನಾಟಕ ಭಾಗಕ್ಕೆ ಜೋಳ ಮತ್ತು ಅಕ್ಕಿ ಮಾಡಿದ್ದೀವಿ.

ವ್ಯಕ್ತಿ: ಸಾಲುತ್ತಾ ಸಾರ್? ಈಗ ಲಾಕ್‌ಡೌನ್ ಬೇರೆ ಇದೆ. ದುಡಿಮೆ ಇಲ್ಲ.
ಸಚಿವ: ಕೇಂದ್ರ ಸರ್ಕಾರ ಕೊಡ್ತಿದೆ. ಮೇ, ಜೂನ್‌ನಲ್ಲಿ 5 ಕೆ.ಜಿ. ಅಕ್ಕಿ ಕೊಡುತ್ತದೆ.

ವ್ಯಕ್ತಿ: ಯಾವಾಗ ಕೊಡ್ತೀರಾ?
ಸಚಿವ: ಬರುವ ತಿಂಗಳು.

ವ್ಯಕ್ತಿ: ಅಲ್ಲಿವರೆಗೆ ಉಪವಾಸ ಇರದಾ ಸರ್? ಸತ್ಹೋಗ್‌ಬಿಡೋದಾ?
ಸಚಿವ: ಸತ್ತು ಹೋದರೆ ಒಳ್ಳೆಯದು. ಅದಕ್ಕಿಂತ, ಅಕ್ಕಿ ಮಾರುವ ದಂಧೆ ಬಂದ್ ಮಾಡಿ. ಮತ್ತೆ ಫೋನ್ ಮಾಡಬೇಡಿ.

ದೂರವಾಣಿ ಸಂಭಾಷಣೆಯಆಡಿಯೊ ಕೇಳಿ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.