ಭೂತಾರಾಧನೆ; ಅಧ್ಯಯನ ಮಾಡಲಿ: ಸಚಿವೆ ಕರಂದ್ಲಾಜೆ

ಹುಬ್ಬಳ್ಳಿ: ‘ಸಿನಿಮಾ ಕುರಿತು ಯಾರು ಬೇಕಾದರೂ ಹೇಳಿಕೆ ನೀಡಬಹುದು. ಆದರೆ, ಭೂತಕೋಲ, ಭೂತಾರಾಧನೆ, ದೈವಾರಾಧನೆ, ಕೇರಳದ ತೆಯ್ಯಂ ಬಗ್ಗೆ ಮಾತನಾಡುವವರು, ಅದರ ಬಗ್ಗೆ ಅಧ್ಯಯನ ಮಾಡಲಿ’ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಕಾಂತಾರ ಚಿತ್ರದ ಬಗ್ಗೆ ನಟ ಚೇತನ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಜನರು ಭೂತಾರಾಧನೆ, ದೈವಾರಾಧನೆಯನ್ನು ಸಂಪ್ರದಾಯದ ಪ್ರಕಾರ ಹಿಂದಿನಿಂದಲೂ ಮಾಡಿಕೊಂಡು ಬರುತ್ತಿದ್ದು, ಇದರಲ್ಲೇ ನೆಮ್ಮದಿ ಕಾಣುತ್ತಿದ್ದಾರೆ. ಇದು ನಮ್ಮ ನಾಡಿನ ಸಂಸ್ಕೃತಿ. ಎಲ್ಲರೂ ಇದನ್ನು ಗೌರವಿಸಬೇಕು. ಇಲ್ಲದಿದ್ದರೆ ಸುಮ್ಮನಿರಬೇಕು. ನಮ್ಮ ದೇಶದಲ್ಲಿ ನಾಸ್ತಿಕ, ಆಸ್ತಿಕ ಇಬ್ಬರಿಗೂ ಜಾಗ ಇದೆ’ ಎಂದು ಹೇಳಿದರು.
‘ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಉತ್ತರ ಪ್ರದೇಶಗಳು ದೇಶದ ಭಾಗವಾಗಿಯೇ ಇವೆ. ಇಲ್ಲಿ ಭಾರತ ಜೋಡೊ ಅಗತ್ಯ ಇಲ್ಲ. ದೇಶ ವಿಭಜನೆ ಆಗಿದ್ದು ಕಾಂಗ್ರೆಸ್‌ನಿಂದ. ಬೇರೆ ದೇಶಗಳಿಗೆ ಕಾಂಗ್ರೆಸ್ ಸರ್ಕಾರ ಬಿಟ್ಟುಕೊಟ್ಟಿರುವ ಜಾಗದಲ್ಲಿ ಪಾದಯಾತ್ರೆ ನಡೆಸಲಿ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.