ಬೆಳಗಾವಿ: ಈ ದೇಶ ಯಾರೊಬ್ಬರ ಸ್ವತ್ತಲ್ಲ. ಇದು ಪ್ರತಿಯೊಬ್ಬರ ಆಸ್ತಿ. ಕೇವಲ ಅದಾನಿಗೆ ದೇಶ ಸೀಮಿತವಾಗಿದೆ ಎಂಬ ಭ್ರಮೆಯಿಂದ ಬಿಜೆಪಿ ಹೊರಬರಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಕಾಂಗ್ರೆಸ್ ಯುವ ಕ್ರಾಂತಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ಭಾರತ್ ಜೋಡೋ ಯಾತ್ರೆಯಲ್ಲಿ ನನಗೆ ಹಲವು ಸತ್ಯಗಳು ತಿಳಿದಿವೆ. ನಫರತ್ ಕಿ ಮಾರ್ಕೆಟ್ ಮೇ ಮೊಹಬ್ಬತ್ ಕಿ ದುಕಾನ್ (ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ) ಇಡುವುದಾಗಿ ಯುವಜನರು ಕೂಗಿ ಹೇಳಿದ್ದಾರೆ. ಇಡೀ ದೇಶದ ಜನ ದ್ವೇಷ ಮರೆತು, ಒಂದಾಗಿ ಬಾಳಲು ಇಚ್ಚಿಸಿದ್ದಾರೆ’ ಎಂದು ರಾಹುಲ್ ಗಾಂಧಿ ಹೇಳಿದರು.
‘ಈ ದೇಶ ಯಾರೊಬ್ಬರ ಸ್ವತ್ತಲ್ಲ. ಇದು ಪ್ರತಿಯೊಬ್ಬರ ಆಸ್ತಿ. ಕೇವಲ ಅದಾನಿಗೆ ದೇಶ ಸೀಮಿತವಾಗಿದೆ ಎಂಬ ಭ್ರಮೆಯಿಂದ ಬಿಜೆಪಿ ಹೊರಬರಬೇಕು. ವಿಮಾನ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಪ್ರತಿಯೊಂದು ಗುತ್ತಿಗೆಯೂ ಅದಾನಿ ಒಬ್ಬರಿಗೇ ಏಕೆ ಹೋಗುತ್ತಿವೆ ಎಂಬುದನ್ನು ಯುವಜನರ ಅರ್ಥ ಮಾಡಿಕೊಳ್ಳಬೇಕು’ ಎಂದೂ ಕರೆ ನೀಡಿದರು.
‘ಕರ್ನಾಟಕದ ಯುವಕರು ಎಲ್ಲಿ ಕರೆದರೂ, ಎಷ್ಟು ಬಾರಿ ಕರೆದರೂ ನಾನು ಬರುತ್ತೇನೆ. ಒಂದಾಗಿ ಚುನಾವಣೆ ಎದುರಿಸೋಣ. ಭ್ರಷ್ಟ ಸರ್ಕಾರ ಕಿತ್ತೆಸೆಯೋಣ’ ಎಂದರು.
ಇದನ್ನೂ ಓದಿ: ದೇಶಕ್ಕೆ ಸಂದೇಶ ನೀಡಲಿದೆ ರಾಜ್ಯದ ಚುನಾವಣೆ: ಖರ್ಗೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.