ಮುಂಬೈ: ಅಮೆರಿಕದ ಸಂಸ್ಥೆಯ ಭಾರತದ ಅಧೀನ ಸಂಸ್ಥೆ ‘ಬ್ಲೇಡ್ ಇಂಡಿಯಾ’ ಈಗ ಬೆಂಗಳೂರಿನಿಂದ ಕೊಡಗು ಮತ್ತು ಕಬಿನಿಗೆ ಹೆಲಿಕಾಪ್ಟರ್ ಪ್ರಯಾಣ ಸೇವೆಯನ್ನು ಆರಂಭಿಸಿದೆ.

ಈ ಎರಡೂ ಮಾರ್ಗದಲ್ಲಿ ಸೇವೆ ಆರಂಭದೊಂದಿಗೆ ಉಭಯ ಸ್ಥಳಗಳಿಗೆ ಬೆಂಗಳೂರಿನಿಂದ ಪ್ರಯಾಣದ ಅವಧಿ 6–7 ಗಂಟೆ ಕುಗ್ಗಲಿದೆ ಎಂದು ಕಂಪನಿಯ ಹೇಳಿಕೆ ತಿಳಿಸಿದೆ.

ಸಂಚಾರದಟ್ಟಣೆ ಇರುವ ಹಾಗೂ ರಸ್ತೆಯ ಮೂಲಕ ಸುಲಭ ಮತ್ತು ತ್ವರಿತವಾಗಿ ತಲುಪಲಾಗದ ಸ್ಥಳಗಳಿಗೆ ಹೆಲಿಕಾಪ್ಟರ್ ಸೇವೆಯನ್ನು ಒದಗಿಸಲು ಸಂಸ್ಥೆಯು ಉದ್ದೇಶಿಸಿದೆ ಎಂದು ತಿಳಿಸಿದೆ.

ಬ್ಲೇಡ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಅಮಿತ್ ದತ್ತಾ, ‘ಕರ್ನಾಟಕದಲ್ಲಿ ಕೆಲ ಅತ್ಯುತ್ತಮ ತಾಣಗಳಿವೆ. ಆದರೆ, ಅಲ್ಲಿಗೆ ತಲುಪುವುದೇ ಕಷ್ಟ. ರಸ್ತೆ ಮೂಲಕ ತೆರಳಲು 6 ಗಂಟೆ ಬೇಕಿತ್ತು. ಈಗ ಜನತೆ ಬಯಸಿದ ತಾಣದಲ್ಲಿ ಹೆಚ್ಚು ಕಾಲ ಕಳೆಯಬಹುದಾಗಿದೆ’ ಎಂದು ಹೇಳಿದರು.

ವಾರಾಂತ್ಯದಲ್ಲಿ ಒಪ್ಪಂದ ಸೇವೆ ಒದಗಿಸುವ ಮೂಲಕ ‘ಬ್ಲೇಡ್’ ಡಿಸೆಂಬರ್ 2020ರಲ್ಲಿ ಕರ್ನಾಟಕದಲ್ಲಿ ಕಾರ್ಯಾರಂಭ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.