ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ತಿಂಗಳಲ್ಲಿ ಆರೋಗ್ಯ ವಿಷನ್ ಗ್ರೂಪ್ ವರದಿ: ಸಚಿವ ಡಾ.ಕೆ. ಸುಧಾಕರ್

Last Updated 1 ಜನವರಿ 2021, 21:43 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ವೈದ್ಯಕೀಯ ಕಾಲೇಜುಗಳ ಬ್ರ್ಯಾಂಡಿಂಗ್‌, ಆಸ್ಪತ್ರೆಗಳಲ್ಲಿ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಬಳಕೆ, ಡಿಜಿಟಲ್‌ ದಾಖಲಾತಿ, ಜನ ಸಾಮಾನ್ಯರಿಗೆ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸುವ ಬಗ್ಗೆ ಆರೋಗ್ಯ ವಿಷನ್‌ ಗ್ರೂಪ್‌ ತನ್ನ ಮೊದಲ ಸಭೆಯಲ್ಲಿ ಚರ್ಚೆ ನಡೆಸಿದೆ.

ವಿಧಾನಸೌಧದಲ್ಲಿ ಶುಕ್ರವಾರ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ‘ಆರೋಗ್ಯ ಕ್ಷೇತ್ರದಲ್ಲಿ ಸಮಗ್ರ ಸುಧಾರಣೆ ತರಲು ರಚಿಸಿರುವ ವಿಷನ್‌ ಗ್ರೂಪ್‌ ಆರು ತಿಂಗಳಲ್ಲಿ ವರದಿ ನೀಡಲಿದೆ’ ಎಂದರು.

‘2017ರ ಆರೋಗ್ಯ ನೀತಿ ನಮ್ಮಲ್ಲಿದೆ. ಇದರ ಜೊತೆಗೆ ರಾಜ್ಯದ ಜನರಿಗೆ ಸುಲಭವಾಗಿ ಪರಿಣಾಮಕಾರಿ ಆರೋಗ್ಯ ಸೇವೆ ಒದಗಿಸಲು, ಆರೋಗ್ಯ ಕ್ಷೇತ್ರದ ಸಮಗ್ರ ಬದಲಾವಣೆ ಕುರಿತು ಚರ್ಚೆ ನಡೆಸಲಾಯಿತು’ ಎಂದು ಹೇಳಿದರು.

ರಾಜ್ಯದಲ್ಲಿ ಪ್ರಾಥಮಿಕ, ಸಮುದಾಯ ಮತ್ತು ಜಿಲ್ಲಾ ಮಟ್ಟದ್ದು ಎಂಬ ಮೂರು ಹಂತಗಳ ಆರೋಗ್ಯ ಸೇವೆ ಲಭ್ಯವಿದೆ. ಜೊತೆಗೆ ವೈದ್ಯಕೀಯ ಕಾಲೇಜುಗಳಿವೆ. ಇವುಗಳನ್ನು ಒಂದಕ್ಕೊಂದು ಸಂಪರ್ಕ ಕಲ್ಪಿಸಿ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕಿದೆ. ರೋಗ ಬರದಂತೆ ತಡೆಯುವ ಕ್ರಮಕ್ಕೆ ಹೆಚ್ಚು ಒತ್ತು ನೀಡಲು ಉದ್ದೇಶಿಸಲಾಗಿದೆ. ಇವೆಲ್ಲ ಅಂಶಗಳು ಸೇರಿದಂತೆ ‘ಆರೋಗ್ಯ ಕರ್ನಾಟಕ’ ನಿರ್ಮಿಸಲು ವರದಿ ರೂಪಿಸಲು ಆರು ತಿಂಗಳ ಸಮಯ ನೀಡಲಾಗಿದೆ ಎಂದರು.

ಈ ಗ್ರೂಪ್‌ನಲ್ಲಿ ಉಪಸಮಿತಿಗಳನ್ನು ರಚಿಸಿ, ತಜ್ಞರ ಸಲಹೆ ಪಡೆದು ವರದಿ ರೂಪಿಸಲಾಗುತ್ತದೆ. ಈ ಗ್ರೂಪ್‌ನಲ್ಲಿ ಅಲೋಪತಿ ಹಾಗೂ ಆಯುಷ್‌ ತಜ್ಞರನ್ನೂ ಸೇರಿಸಲಾಗಿದೆ ಎಂದು ಸುಧಾಕರ್‌ ಹೇಳಿದರು.

ಸಭೆಯ ಪ್ರಮುಖ ಅಂಶಗಳು

*ಪ್ರತಿ 50 ಕಿ.ಮೀ.ಗೆ ಒಂದರಂತೆ ಅಥವಾ ಜಿಲ್ಲಾ ಮಟ್ಟದಲ್ಲಿ ಒಂದು ಟ್ರಾಮಾ ಕೇರ್ ಕೇಂದ್ರ ನಿರ್ಮಿಸಬೇಕು. ಇದರಿಂದ ಅಪಘಾತಕ್ಕೊಳಗಾದವರ ಜೀವ ರಕ್ಷಣೆ ಸಾಧ್ಯ.

* ಮಕ್ಕಳ ಆರೋಗ್ಯ ಕಾಪಾಡಲು ಟೆಲಿಮೆಡಿಸಿನ್‌, ಸಾರ್ವಜನಿಕರ ಆರೋಗ್ಯ ಮಾಹಿತಿಯ ಡಿಜಿಟಲ್‌ ದಾಖಲಾತಿ, ಶುಚಿತ್ವ, ಕೈಗೆಟಕುವ ದರದಲ್ಲಿ ಚಿಕಿತ್ಸೆ ಕುರಿತು ಹೊಣೆಗಾರಿಕೆ ನಿಗದಿಪಡಿಸುವುದು, ಇದರಿಂದ ಆಸ್ಪತ್ರೆಗಳಲ್ಲಿ ಗುಣಮಟ್ಟ ಸುಧಾರಣೆ ಆಗಲಿದೆ.

* ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಆಯುಷ್‌ ಕೇಂದ್ರ ಆರಂಭಿಸುವುದು. ಒಂದು ರೋಗದ ಚಿಕಿತ್ಸೆಗೆ ರೋಗಿಗಳು ಇರುವ ಸ್ಥಳದಲ್ಲಿಯೇ ಲಭ್ಯವಿರುವ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಹಂತದ ಚಿಕಿತ್ಸೆಯನ್ನು ಪಡೆದು ಮುಂದುವರೆದ ಚಿಕಿತ್ಸೆಗೆ ವಿಶೇಷ ಆಸ್ಪತ್ರೆ
(ಹಬ್‌)ಗೆ ಸಂಪರ್ಕಿಸಲು ಟೆಲಿ ಐಸಿಯು
ಮಾದರಿಯನ್ನು ಅಳವಡಿಸುವುದು

* ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಬ್ರ್ಯಾಂಡಿಂಗ್‌ ಮಾಡುವುದು. ಜೀವ ರಕ್ಷಕ ಔಷಧಿಗಳ ನಿರಂತರ ಪೂರೈಕೆ, ಅಂಗಾಂಗ ಕಸಿ ಕಾಯ್ದೆಯ ಪರಿಷ್ಕರಣೆ

* ಐಎಎಸ್‌, ಕೆಎಎಸ್‌ ವೃಂದಗಳ ಮಾದರಿಯಲ್ಲಿ ಐಎಂಎಸ್‌, ಕೆಎಂಎಸ್‌ ವೃಂದದ ಸೃಜನೆ
ಮಾಡುವುದು

* ಸರ್ಕಾರಿ ಆಸ್ಪತ್ರೆಗಳಲ್ಲಿ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಮೂಲಕ ಆರೋಗ್ಯ ಸೇವೆಗಳನ್ನು ಪಡೆಯುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT