ಪಾದಯಾತ್ರೆ ನಿಲ್ಲಿಸಲು ನಕಲಿ ಅಂಕಿಅಂಶ ಸೃಷ್ಟಿ: ಡಿ.ಕೆ. ಶಿವಕುಮಾರ್

ಬೆಂಗಳೂರು: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ಆರಂಭಿಸಿದ್ದ ಪಾದಯಾತ್ರೆ ನಿಲ್ಲಿಸಲು ರಾಜ್ಯ ಸರ್ಕಾರ ಕೋವಿಡ್ ಹೆಸರಿನಲ್ಲಿ ನಕಲಿ ಅಂಕಿಅಂಶಗಳನ್ನು ಸೃಷ್ಟಿಸಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದರು.
‘ಕಾಂಗ್ರೆಸ್ ಪಾದಯಾತ್ರೆಯ ಸಂದರ್ಭದಲ್ಲಿ ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ 85 ಪೊಲೀಸರಿಗೆ ಕೋವಿಡ್ ತಗುಲಿದೆ’ ಎಂಬ ಬಿಜೆಪಿ ಆರೋಪಕ್ಕೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ಎಲ್ಲವೂ ಬೋಗಸ್ ಅಂಕಿಅಂಶ. ಸರ್ಕಾರ ನಿರ್ಬಂಧ ಹೇರಿದಾಗ ಕೋವಿಡ್ ಪ್ರಕರಣಗಳ ಸಂಖ್ಯೆ ಎಷ್ಟಿತ್ತು? ಈಗ ಎಷ್ಟಿದೆ ಎನ್ನುವುದನ್ನು ನೋಡಿ’ ಎಂದರು.
‘ಪಾದಯಾತ್ರೆ ನಿಲ್ಲಿಸುವುದಕ್ಕಾಗಿಯೇ ನಕಲಿ ಅಂಕಿಅಂಶ ಸೃಷ್ಟಿಸಲಾಗಿತ್ತು. ಸಚಿವರು ಈಗ ಏಕೆ ಮಾತನಾಡುತ್ತಿದ್ದಾರೆ? ಪಾದಯಾತ್ರೆ ಸಂದರ್ಭದಲ್ಲಿ ಭದ್ರತೆಗೆ ಪೊಲೀಸರೇ ಇರಲಿಲ್ಲ. ಸಂಚಾರ ನಿಯಂತ್ರಣಕ್ಕೂ ಪೊಲೀಸರು ಇರಲಿಲ್ಲ. ನನ್ನ ಮೇಲೆ ಕಾರ್ಯಕರ್ತರು ಬೀಳುವಾಗಲೂ ತಡೆಯಲಿಲ್ಲ’ ಎಂದು ಹೇಳಿದರು.
ನವದೆಹಲಿಯ ಅಮರ್ ಜವಾನ್ ಜ್ಯೋತಿ ಮತ್ತು ರಾಷ್ಟ್ರೀಯ ಯುದ್ಧ ಸ್ಮಾರಕಗಳಲ್ಲಿನ ಜ್ಯೋತಿಗಳನ್ನು ವಿಲೀನಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರ ಕುರಿತು ಪ್ರತಿಕ್ರಿಯಿಸಿದ ಅವರು, ‘ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ಗೌರವಿಸಬೇಕಿತ್ತು. ಸ್ಥಳಾಂತರ ಮಾಡುವುದು ನೈತಿಕ ಮೌಲ್ಯವಲ್ಲ. ಇದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.