ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ಭಾಗಿಯಾದ ಆರೋಪದಡಿ ಮತ್ತೊಬ್ಬ ಆರೋಪಿ ಯನ್ನು ಸಿಸಿಬಿ ಪೊಲೀಸರು ಬಂಧಿ ಸಿದ್ದು, ಅದರ ಬೆನ್ನಲ್ಲೇ ಆತನ ಫ್ಲ್ಯಾಟ್ ಮೇಲೂ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

‘ಅಂತರರಾಷ್ಟ್ರೀಯ ಡ್ರಗ್ಸ್ ಜಾಲದ ಬಗ್ಗೆ ಕಾಟನ್ಪೇಟೆ ಠಾಣೆಯಲ್ಲಿ ದಾಖ ಲಾದ ಪ್ರಕರಣದಲ್ಲಿ ದಿನಕ್ಕೊಂದು ಹೊಸ ಮಾಹಿತಿ ಸಿಗುತ್ತಿದೆ. ಅದನ್ನು ಆಧರಿಸಿ ಹಾಸನದ ಶ್ರೀನಿವಾಸ್ ಸುಬ್ರಮಣಿಯನ್ ಅಲಿಯಾಸ್ ಶ್ರೀ ಎಂಬಾತನನ್ನು ಶನಿವಾರ ವಶಕ್ಕೆ
ಪಡೆದು ವಿಚಾರಣೆ ನಡೆಸಲಾಯಿತು’ ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದರು.

‘ಶ್ರೀನಿವಾಸ್ ನೀಡಿದ್ದ ಮಾಹಿತಿ ಆಧರಿಸಿ, ನಗರದ ಅಪಾರ್ಟ್ಮೆಂಟ್ ಸಮುಚ್ಚಯವೊಂದರಲ್ಲಿರುವ ಆತನ ಫ್ಲ್ಯಾಟ್ ಮೇಲೆ ಶನಿವಾರ ದಾಳಿ ಮಾಡಲಾಗಿದೆ. 100 ಗ್ರಾಂ ಗಾಂಜಾ, 0.5 ಗ್ರಾಂ ಹಶೀಷ್, 13 ಡ್ರಗ್ಸ್ ಮಾತ್ರೆ ಹಾಗೂ 1.1 ಗ್ರಾಂ ಎಂಡಿಎಂಎ, ಫ್ಲ್ಯಾಟ್ನಲ್ಲಿ ಸಿಕ್ಕಿವೆ’ ಎಂದೂ ವಿವರಿ ಸಿದರು.

ಖಾಸಗಿ ಕಂಪನಿಗಳ ಅತಿಥಿಗಳು ಉಳಿದುಕೊಳ್ಳಲು ವಿಲ್ಲಾ ಹಾಗೂ ಫ್ಲ್ಯಾಟ್ ಬಾಡಿಗೆ ಕೊಡಿಸುವ ಕೆಲಸ ಮಾಡುತ್ತಿದ್ದ ಆರೋಪಿ ಶ್ರೀನಿವಾಸ್, ಹಲವು ವರ್ಷಗಳ ಹಿಂದೆಯೇ ತನ್ನ ಸ್ವಂತಕ್ಕೆಂದು ಫ್ಲ್ಯಾಟ್ಬಾಡಿಗೆ ಪಡೆದಿದ್ದ. ಆತನೂ ಮಾದಕ ವ್ಯಸನಿಯೆಂಬ ಅನುಮಾನವಿದೆ. ತನ್ನ ಫ್ಲ್ಯಾಟ್ನಲ್ಲಿ ಪಾರ್ಟಿಗಳಿಗೆ ಹಾಗೂ ಮಾದಕ ವ್ಯಸನಿಗಳು ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದ. ಆತನೇ ಡ್ರಗ್ಸ್ ತರಿಸಿಕೊಂಡು ಫ್ಲ್ಯಾಟ್ನಲ್ಲಿ ಇಟ್ಟುಕೊಂಡಿದ್ದನೆಂಬ ಸಂಶಯ ಸಿಸಿಬಿ ಪೊಲೀಸರಿಗೆ ಇದೆ.

ಫ್ಲ್ಯಾಟ್ಗೆ ಹೋಗಿಬಂದಿದ್ದ ರಾಗಿಣಿ: ಶ್ರೀನಿವಾಸ್ ಜೊತೆ ಒಡನಾಟವಿಟ್ಟುಕೊಂಡಿದ್ದ ನಟಿ ರಾಗಿಣಿ, ಬಂಧನಕ್ಕೂ ಮುನ್ನ ಆತನ ಫ್ಲ್ಯಾಟ್ಗೆ ನಾಲ್ಕು ಬಾರಿ ಹೋಗಿ ಬಂದಿದ್ದರು ಎಂದು ಗೊತ್ತಾಗಿದೆ. ನಟಿ ರಾಗಿಣಿ ದ್ವಿವೇದಿ ಅವರು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

‘ಡ್ರಗ್ಸ್ ಸಿಕ್ಕಿರುವ ಫ್ಲ್ಯಾಟ್ನಲ್ಲಿ ನಟಿ ಉಳಿದುಕೊಳ್ಳುತ್ತಿದ್ದರು. ಅಲ್ಲಿಯೇ ಅವರು ಡ್ರಗ್ಸ್ ಸೇವಿಸಿದ್ದರೆಂಬ ಬಗ್ಗೆ ಶ್ರೀನಿವಾಸ ಹೇಳಿಕೆ ನೀಡಿದ್ದಾರೆ. ಅದರ ಆಧಾರದಲ್ಲಿ ತನಿಖೆ ಮುಂದುವರಿಸಲಾಗಿದೆ.

ನಟಿಯರಿಬ್ಬರ ತಲೆ ಕೂದಲು ಹಾಗೂ ರಕ್ತದ ಪರೀಕ್ಷಾ ವರದಿಗಾಗಿ ಕಾಯುತ್ತಿದ್ದೇವೆ’ ಎಂದು ಸಿಸಿಬಿಯ ಅಧಿಕಾರಿಯೊಬ್ಬರು ಹೇಳಿದರು.

ಪಾರ್ಟಿಗಳಿಗೆ ರೌಡಿಗಳ ‘ಕಾವಲು’
‘ದೆಹಲಿಯ ವಿರೇನ್ ಖನ್ನಾ ನಿರ್ದೇಶನದಂತೆ ರಾಜ್ಯದ ಹಲವೆಡೆ ಪಾರ್ಟಿಗಳು ನಡೆಯುತ್ತಿದ್ದವು. ಉಳಿದ ಆರೋಪಿಗಳು ಪಾರ್ಟಿ ಆಯೋಜನೆ, ಡ್ರಗ್ಸ್ ಪೂರೈಕೆ ಹಾಗೂ ಗ್ರಾಹಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದರು. ಪಾರ್ಟಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ರೌಡಿಗಳನ್ನು ಬಳಸಿಕೊಳ್ಳುತ್ತಿದ್ದ ಸಂಗತಿ ಹೊರಬಿದ್ದಿದೆ.

‘ನಗರದ ಕೆಲ ರೌಡಿಗಳು ಪಾರ್ಟಿಗಳಲ್ಲಿ ಪಾಲ್ಗೊಂಡು ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮಾಹಿತಿ ಇದೆ. ಇಂಥ ಪಾರ್ಟಿಗಳಲ್ಲಿ ಡ್ರಗ್ಸ್ ಪೂರೈಕೆಯಾಗುತ್ತಿದ್ದ ಬಗ್ಗೆ ಪುರಾವೆಗಳು ಸಿಕ್ಕಿವೆ’ ಎಂದು ಸಿಸಿಬಿ ಮೂಲಗಳು ತಿಳಿಸಿದೆ.

ಅಕುಲ್ ಬಾಲಾಜಿ ಸೇರಿ ಮೂವರ ಮೊಬೈಲ್ ಪರಿಶೀಲನೆ
ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ಶನಿವಾರ ವಿಚಾರಣೆ ಎದುರಿಸಿದ್ದ ರಿಯಾಲಿಟಿ ಶೋ ನಿರೂಪಕ ಅಕುಲ್ ಬಾಲಾಜಿ, ಕಾಂಗ್ರೆಸ್ ಮುಖಂಡರೊಬ್ಬರ ಪುತ್ರ ಆರ್.ವಿ.ಯುವರಾಜ್ ಹಾಗೂ ‘ನೂರು ಜನ್ಮಕು’ ಸಿನಿಮಾ ನಟ ಸಂತೋಷ್ ಕುಮಾರ್ ಅವರ ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆ. ಆ ಮೊಬೈಲ್ಗಳನ್ನು ಸಿಸಿಬಿಯ ತಾಂತ್ರಿಕ ವಿಭಾಗದ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ.

‘ಆರೋಪಿ ವೈಭವ್ ಜೈನ್ ಜೊತೆಯಲ್ಲಿ ಮೂವರೂ ಒಡನಾಟವಿಟ್ಟುಕೊಂಡಿದ್ದ ಪುರಾವೆ ಇದೆ. ಆ ಬಗ್ಗೆ ಮತ್ತಷ್ಟು ಪುರಾವೆ ಕಲೆ ಹಾಕಲು ಮೊಬೈಲ್ ಜಪ್ತಿ ಮಾಡಲಾಗಿತ್ತು. ಮೊಬೈಲ್ ಪರಿಶೀಲನೆ ಬಳಿಕವೇ ನಿಖರ ಮಾಹಿತಿ ತಿಳಿಯಲಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಹೋಟೆಲ್, ರೆಸಾರ್ಟ್ಗಳಿಂದ ಮಾಹಿತಿ ಸಂಗ್ರಹ
ಬಂಧಿತ ಆರೋಪಿಗಳು ಆಯೋಜಿಸುತ್ತಿದ್ದ ಡ್ರಗ್ಸ್ ಪಾರ್ಟಿಗಳಿಗೆ ಜಾಗ ನೀಡಿದ್ದ ನಗರದ ಕೆಲ ಹೋಟೆಲ್ ಹಾಗೂ ರೆಸಾರ್ಟ್ಗಳಿಂದ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಪಾರ್ಟಿ ಆಯೋಜಿಸಲು ಜಾಗ ಕಾಯ್ದಿರಿಸಿದವರು ಯಾರು? ಯಾವಾಗೆಲ್ಲ ಪಾರ್ಟಿಗಳು ನಡೆದಿವೆ? ಯಾರೆಲ್ಲ ಭಾಗವಹಿಸಿದ್ದರು? ಅದರ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳು ಏನಾದರೂ ಇದೆಯಾ? ಯಾವ ಆಧಾರದಲ್ಲಿ ಪಾರ್ಟಿಗೆ ಜಾಗ ನೀಡಲಾಗಿತ್ತು? ಪಾರ್ಟಿ ಬಗ್ಗೆ ಸಂಬಂಧಪಟ್ಟ ಠಾಣೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತಾ ? ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಪಡೆಯುತ್ತಿರುವುದಾಗಿ ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.