ಭಾನುವಾರ, ಜನವರಿ 17, 2021
17 °C

ಯಲ್ಲಾಪುರದಲ್ಲಿ ಪೂಜೆ ಮುಗಿಸಿ ಹೊರಟಿದ್ದ ಶ್ರೀಪಾದ ನಾಯಕ್ ಕುಟುಂಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Shripad y Naik

ಯಲ್ಲಾಪುರ: ಯಲ್ಲಾಪುರಕ್ಕೆ ಭಾನುವಾರ ರಾತ್ರಿ  12 ಗಂಟೆಯ ಸುಮಾರಿಗೆ ಆಗಮಿಸಿದ ಕೇಂದ್ರ ಸಚಿವ ಶ್ರೀಪಾದ ನಾಯಕ್ ಹಾಗೂ ಕುಟುಂಬ, ಸೋಮವಾರ ಬೆಳಿಗ್ಗೆ ತಾಲ್ಲೂಕಿನ ಚಂದಗುಳಿ ಗಂಟೆ ಗಣಪತಿ ದೇವಸ್ಥಾನಕ್ಕೆ ತೆರಳಿ ಗಣಹವನದಲ್ಲಿ ಪಾಲ್ಗೊಂಡಿದ್ದರು.

ನಂತರ ದೇಹಳ್ಳಿ ಬಳಿಯ ಕೂಡಿಗೆಯ ವೈದಿಕರೊಬ್ಬರ ಮನೆಯಲ್ಲಿ ಚಂಡಿಕಾ ಹವನ ಪೂರೈಸಿ ಅಲ್ಲಿಯೇ ಊಟ ಮಾಡಿದ್ದರು. ಸಂಜೆ 4.45ಕ್ಕೆ ಅಲ್ಲಿಂದ ಹೊರಟು 5.10ಕ್ಕೆ ಬಿಕ್ಕು ಗುಡಿಗಾರ ಕಲಾ ಕೇಂದ್ರಕ್ಕೆ ಪತ್ನಿ ಸಮೇತರಾಗಿ ಭೇಟಿ ನೀಡಿದ್ದರು. ಅಲ್ಲಿನ ಕಲಾಕೃತಿ, ತಯಾರಿಕೆ ವೀಕ್ಷಿಸಿದ ನಂತರದಲ್ಲಿ ಜಿ.ಎಸ್.ಬಿ ಸಮಾಜ ಪ್ರಮುಖ ಗಜಾನನ ಭಟ್ಟ ಅವರ ಮನೆಗೆ ಭೇಟಿ ನೀಡಿದ್ದರು.

ಓದಿ: 

ನಂತರ ಗ್ರಾಮ ದೇವಿ ದೇವಸ್ಥಾನ ಹಾಗೂ ಈಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರದಲ್ಲಿ ಸ್ನೇಹಿತ ಬಿಕ್ಕು ಗುಡಿಗಾರ ಕಲಾ ಕೇಂದ್ರದ ಸಂತೋಷ ಗುಡಿಗಾರ, ಅರುಣ ಗುಡಿಗಾರ ಅವರ ಮನೆ ಭೇಟಿ ನೀಡಿ 7 ಗಂಟೆಗೆ ವಾಪಸ್ ಗೋಕರ್ಣಕ್ಕೆ ಹೊರಟಿದ್ದರು. ಸಚಿವರ ಪತ್ನಿ ವಿಜಯಾ ಅವರಿಗೆ ಸಂತೋಷ ಗುಡಿಗಾರ ಕುಟುಂಬದವರು ಉಡಿ ತುಂಬಿ ಬೀಳ್ಕೊಟ್ಟಿದ್ದರು.


ವಿಜಯಾ ಅವರಿಗೆ ಉಡಿ ತುಂಬಿದ ಸಂದರ್ಭದ ಫೋಟೊ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು