ಗುರುವಾರ , ಮೇ 19, 2022
20 °C

‘ನೂತನ ಸಭಾಪತಿ ಆಯ್ಕೆ: ರಾಜ್ಯಪಾಲರು ದಿನ ನಿರ್ಧರಿಸಲಿದ್ದಾರೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ತಮ್ಮ ರಾಜೀನಾಮೆಯನ್ನು ಉಪ ಸಭಾಪತಿ ಎಂ.ಕೆ. ಪ್ರಾಣೇಶ್‌ ಅವರಿಗೆ ಸಲ್ಲಿಸಿದ್ದು, ಅದು ಅಂಗೀಕಾರಗೊಂಡಿದೆ. ನೂತನ ಸಭಾಪತಿ ಆಯ್ಕೆಗೆ ರಾಜ್ಯಪಾಲರು ದಿನ ನಿಗದಿಪಡಿಸಲಿದ್ದಾರೆ’ ಎಂದು ವಿಧಾನ ಪರಿಷತ್ ಕಾರ್ಯದರ್ಶಿ ಕೆ. ಮಹಾಲಕ್ಷ್ಮಿ ತಿಳಿಸಿದರು.

‘ಸದನವನ್ನು ಇನ್ನೂ ಎರಡು ದಿನ ಮುಂದುವರಿಸುವಂತೆ ಬಿಜೆಪಿ ಪತ್ರ ನೀಡಿದೆ. ಶುಕ್ರವಾರ ಬೆಳಿಗ್ಗೆ ಕಲಾಪ ಸಮಿತಿ (ಬಿಎಸಿ) ನಡೆಯಲಿದೆ. ಈ ಸಭೆಯಲ್ಲಿ ಕಲಾಪ ಮುಂದುವರಿಸುವ ಬಗ್ಗೆ ತೀರ್ಮಾನ ಆಗಲಿದೆ’ ಎಂದೂ ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.