ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಕದ್ದ ಬಸ್ ತೆಲಂಗಾಣದಲ್ಲಿ ಪತ್ತೆ

Last Updated 21 ಫೆಬ್ರುವರಿ 2023, 22:15 IST
ಅಕ್ಷರ ಗಾತ್ರ

ಚಿಂಚೋಳಿ (ಕಲಬುರಗಿ): ಇಲ್ಲಿನ ಚಿಂಚೋಳಿ ಬಸ್ ನಿಲ್ದಾಣದಿಂದ ಮಂಗಳವಾರ ನಸುಕಿನ 3.30ಕ್ಕೆ ಕಳುವಾಗಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ (ಕೆಕೆಆರ್‌ಟಿಸಿ) ಬಸ್‌, ಮಧ್ಯಾಹ್ನ 4ರ ಸುಮಾರಿಗೆ ತೆಲಂಗಾಣದ ತಾಂಡೂರು ಸಮೀಪದ ಭೂಕೈಲಾಸದಲ್ಲಿ ಪತ್ತೆಯಾಗಿದೆ. ಬಸ್‌ ಕದ್ದ ಆರೋಪಿಗಳಿಗಾಗಿ ಚಿಂಚೋಳಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಚಿಂಚೋಳಿ–ಬೀದರ್ ಮಾರ್ಗದ ಬಸ್‌ ಅನ್ನು ಚಿಂಚೋಳಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ, ಚಾಲಕ ಮತ್ತು ನಿರ್ವಾಹಕರು ವಿಶ್ರಾಂತಿ ಕೊಠಡಿಯಲ್ಲಿ ಮಲಗಿದ್ದರು. ಕಳ್ಳರು ಬಸ್‌ ಚಾಲನೆ ಮಾಡಿಕೊಂಡು ಒಯ್ಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

‘ಬಸ್‌ಅನ್ನು ಕಳ್ಳರು ತಾಲ್ಲೂಕಿನ ಪೋಲಕಪಳ್ಳಿ, ಮಿರಿಯಾಣ, ತೆಲಂಗಾಣದ ತಾಂಡೂರು ಮಾರ್ಗವಾಗಿ ಕೊಡಂಗಲವರೆಗೆ 55 ಕಿ.ಮೀ. ಒಯ್ದಿದ್ದಾರೆ. ನಂತರ ಕೊಡಂಗಲನಿಂದ ಹಿಂದಕ್ಕೆ ಬಂದು, ಚಿಂಚೋಳಿಯಿಂದ 30 ಕಿ.ಮೀ. ದೂರದ ಭೂಕೈಲಾಸದ ರಸ್ತೆ ಬದಿ ತಗ್ಗಿನಲ್ಲಿ ನಿಲ್ಲಿಸಿ ಪರಾರಿ ಆಗಿ ದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

‘ಬಸ್‌ ಪತ್ತೆಗಾಗಿ ರಚಿಸಿದ್ದ ತಂಡಗಳು ಹೈದರಾಬಾದ್ ಮತ್ತು ಮಹಿಬೂಬನಗರಕ್ಕೆ ತೆರಳಿದ್ದವು. ಕಳುವಾದ 13 ಗಂಟೆಯಲ್ಲಿ ಬಸ್‌ ಸಿಕ್ಕಿದೆ’ ಎಂದು ಸಿಪಿಐ ಅಮರಪ್ಪ ಶಿವಬಲ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT