ಗುರುವಾರ , ಜನವರಿ 28, 2021
16 °C
ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆ

ಜೂನ್‌ನಲ್ಲಿ 30 ಸಾವಿರ ಮನೆ ಹಂಚಿಕೆ: ಸಚಿವ ಸೋಮಣ್ಣ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ‘ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ಮನೆಗಳ ಯೋಜನೆ’ಯಡಿ 46,499 ಮನೆಗಳ ನಿರ್ಮಾಣ ಕಾರ್ಯವನ್ನು ಜೂನ್‌ನಲ್ಲಿ ಪೂರ್ಣಗೊಳಿಸಿ, 30 ಸಾವಿರ ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಈ ಯೋಜನೆಯ ಪ್ರಗತಿ ಪರಿ ಶೀಲನೆ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಯೋಜ ನೆಯ ಜಾರಿಗೆ ಇದ್ದ ಎಲ್ಲ ಅಡ್ಡಿಗಳನ್ನೂ ನಿವಾರಿಸಲಾಗಿದೆ. ಸಮರೋಪಾದಿಯಲ್ಲಿ ನಿರ್ಮಾಣ ಕಾಮಗಾರಿ ನಡೆಸ ಲಾಗುವುದು ಎಂದು ತಿಳಿಸಿದರು.

‘ಸರ್ಕಾರ 43,867 ಮನೆಗಳ ನಿರ್ಮಾಣದ ಗುತ್ತಿಗೆ ಪಡೆದಿರುವ ಏಳು ಏಜೆನ್ಸಿಗಳಿಗೆ 334 ಎಕರೆ ಜಮೀನು ಹಸ್ತಾಂತರಿಸಿದೆ. 13,000 ಮನೆಗಳ ನಿರ್ಮಾಣಕ್ಕೆ ಮುಂದಿನ 15 ದಿನಗಳಲ್ಲಿ ಅನುಮೋದನೆ ನೀಡಲಾಗುವುದು. ಮೊದಲ ಹಂತದ ಕಾಮಗಾರಿಗೆ ₹4,475 ಕೋಟಿ ವೆಚ್ಚವಾಗಲಿದೆ. ಎರಡನೇ ಹಂತದಲ್ಲಿ 52 ಸಾವಿರ ಮನೆಗಳ ನಿರ್ಮಾಣಕ್ಕೆ ಅಗತ್ಯವಿರುವ 328 ಎಕರೆ ಭೂಮಿ ನೀಡಲು ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ’ ಎಂದರು.

‘ಹಿಂದಿನ ಸರ್ಕಾರ ಯೋಜನೆ ರೂಪಿ ಸಿತ್ತು. ಆದರೆ, ಏನೂ ಮಾಡಿರಲಿಲ್ಲ. ನಮ್ಮ ಸರ್ಕಾರ ಹಣ ಮಂಜೂರು ಮಾಡುವುದೂ ಸೇರಿದಂತೆ ಎಲ್ಲ ರೀತಿಯ ಕ್ರಮ ತೆಗೆದುಕೊಂಡು ಅನುಷ್ಠಾನ ಮಾಡುತ್ತಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ತಡ ಮಾಡು ವಂತಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಿ ದ್ದೇನೆ’ ಎಂದು ಸೋಮಣ್ಣ ತಿಳಿಸಿದರು.

ಬಡವರು, ಅಸಂಘಟಿತ ಕಾರ್ಮಿಕರು, ಆಟೋ, ಕ್ಯಾಬ್‌ ಚಾಲಕರಿಗೆ ಮನೆಗಳನ್ನು ವಿತರಿಸಲಾಗುವುದು. ಪ್ರತಿ ಮನೆಯ ವೆಚ್ಚ ₹6 ಲಕ್ಷ ಎಂದು ಅಂದಾಜು ಮಾಡಲಾಗಿದ್ದು, ₹5.50 ಲಕ್ಷಕ್ಕೆ ವಿತರಿಸುವ ಕುರಿತು ಚರ್ಚೆ ನಡೆದಿದೆ. ಒಟ್ಟು ಮನೆಗಳಲ್ಲಿ ಶೇ 50 ರಷ್ಟು ಸಂಸದರು ಮತ್ತು ಶಾಸಕರು ಆಯ್ಕೆ ಮಾಡಲಿದ್ದಾರೆ. ಉಳಿದ ಮನೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗುವುದು. ಒಟ್ಟು 36 ಸಾವಿರ ಅರ್ಜಿ ಸಲ್ಲಿಕೆ ಆಗಿವೆ ಎಂದು ಅವರು ಹೇಳಿದರು.

ಯೋಜನೆಯ ಪ್ರಗತಿ
ಆಡಳಿತಾತ್ಮಕ ಅನುಮೋದನೆ: 46,499
ಕಾಮಗಾರಿ ಆದೇಶ: 43,867
ಟೆಂಡರ್‌ ಅನುಮೋದನೆಗೆ ಸಲ್ಲಿಕೆ: 1,282
ಮರುಟೆಂಡರ್‌ ಆಹ್ವಾನ: 1,350
ತಳಪಾಯ ಹಂತ: 8,024
ಮಣ್ಣು ಅಗೆತದ ಹಂತ: 12,806
ತಳಪಾಯ ದಾಟಿದ ಹಂತ: 1,549
ಪ್ರಾಯೋಗಿಕ ನಿರ್ಮಾಣದ ಮನೆಗಳು: 16
ಭೂಮಿ ಸಮತಟ್ಟು ಹಂತ: 31,382

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು