ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ಡೇ ಸಂಸ್ಥಾಪಕ ದಿವಂಗತ ಸಿದ್ಧಾರ್ಥ ಜಮೀನು ₹ 708 ಕೋಟಿಗೆ ಖರೀದಿ ಪ್ರಸ್ತಾವ

ಅರಣ್ಯ ಇಲಾಖೆ ಕ್ರಮಕ್ಕೆ ಪರಿಸರ ಹೋರಾಟಗಾರರ ಆಕ್ರೋಶ
Last Updated 20 ಫೆಬ್ರವರಿ 2023, 23:00 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಫಿ ಡೇ’ ಸಂಸ್ಥಾಪಕ ದಿವಂಗತ ವಿ.ಜಿ.ಸಿದ್ದಾರ್ಥ ಅವರಿಗೆ ಸೇರಿದ, ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿರುವ 4,430 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು ಕರ್ನಾಟಕ ಅರಣ್ಯ ಇಲಾಖೆ ಪ್ರಸ್ತಾವ ಸಿದ್ಧಪಡಿಸಿದೆ.

ರಾಜಕೀಯ ಪ್ರಭಾವಕ್ಕೆ ಒಳಗಾಗಿ ಸಾಲದಿಂದ ಪಾರು ಮಾಡಲು ಅರಣ್ಯ ಇಲಾಖೆ ಈ ತಂತ್ರ ಮಾಡಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.

ಪ್ರತಿ ಎಕರೆಗೆ ₹ 16 ಲಕ್ಷದಂತೆ ಭೂಸ್ವಾಧೀನದ ಒಟ್ಟು ಮೊತ್ತ ₹ 708 ಕೋಟಿಯಾಗಲಿದೆ ಎಂದು ಅಂದಾಜಿಸಲಾಗಿದೆ. ಸಿದ್ದಾರ್ಥ ಅವರ ಕುಟುಂಬವನ್ನು ಸಾಲದ ಸುಳಿಯಿಂದ ಪಾರು ಮಾಡುವ ಉದ್ದೇಶ ಈ ಪ್ರಸ್ತಾವದ ಹಿಂದಿದೆ ಎಂದು ಹೇಳಲಾಗಿದೆ. ಭದ್ರಾ ಹುಲಿ
ಸಂರಕ್ಷಿತ ಪ್ರದೇಶದ ನಿರ್ದೇಶಕರು ಈ ಪ್ರಸ್ತಾವಕ್ಕೆ ಅನುಮತಿ ಕೋರಿ ಬರೆ ದಿರುವ ಪತ್ರವು ‘ಪ್ರಜಾವಾಣಿ’ಗೆ ಲಭಿಸಿದೆ.
2020ರ ಫೆ.14ರಂದು ಈ ಪ್ರಸ್ತಾವ ಸಿದ್ಧವಾಗಿದೆ. ಹುಲಿ ಸಂರಕ್ಷಿತ ಪ್ರದೇಶದ ಪಕ್ಕದ ತಣಿಗೆಬೈಲು ಹಾಗೂ ಮುತ್ತೋಡಿಯ ಜಮೀನು ಮಾರಾಟ ಪ್ರಕ್ರಿಯೆಯನ್ನು ಕಾಫಿ ಡೇ ಗ್ರೂಪ್‌ನವರು ಆಗಲೇ ಆರಂಭಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT