ಗುರುವಾರ , ಫೆಬ್ರವರಿ 2, 2023
27 °C
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ

ಕಾಂಗ್ರೆಸ್‌ ಎಂದರೆ ಪ್ರೆಷರ್‌ ಕುಕ್ಕರ್‌ ಪಾರ್ಟಿ: ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕುಕ್ಕರ್ ಹಂಚಿ ಕಾಂಗ್ರೆಸ್‌ ಶಾಸಕರೇ ಸಿಕ್ಕಿ ಹಾಕಿಕೊಂಡಿದ್ದಾರೆ. ವಾಣಿಜ್ಯ ತೆರಿಗೆ ಅಧಿಕಾರಿಗಳು ಜಪ್ತಿ ಮಾಡಿ ದಂಡ ಹಾಕಿದ್ದಾರೆ. ಕಾಂಗ್ರೆಸ್ ಎಂದರೆ ಪ್ರೆಷರ್ ಕುಕ್ಕರ್ ಪಾರ್ಟಿ. ಕುಕ್ಕರ್‌ನಲ್ಲಿ ಬಾಂಬ್ ಇಟ್ರೂ ಏನೂ ಇಲ್ಲ ಅಂತಾರೆ. ಕುಕ್ಕರ್ ಪಾರ್ಟಿ ದೊಂಬರಾಟದಿಂದ ಅವರಿಗೆ ಏನೂ ಸಹಾಯ ಆಗಲ್ಲ. ರಾಜಕೀಯವಾಗಿ ಕಾಂಗ್ರೆಸ್ ದಿವಾಳಿ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು. 

‌ಹಿರೇಕೆರೂರು ಪಟ್ಟಣದ ಹೊರವಲಯದ ಹೆಲಿಪ್ಯಾಡ್‌ ಬಳಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ಸರ್ಕಾರದ ಮೇಲೆ ಕಾಂಗ್ರೆಸ್‌ನಿಂದ ಭ್ರಷ್ಟಾಚಾರ ಪ್ರಕರಣ ದಾಖಲು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು. ಇದು ಅತ್ಯಂತ ಹಾಸ್ಯಾಸ್ಪದ ಮತ್ತು ಕೀಳುಮಟ್ಟದ್ದು. ಕಾಂಗ್ರೆಸ್‌ನವರು ಕೇವಲ ರಾಜಕೀಯ ಕಾರಣಕ್ಕೆ ಮಾತಾಡ್ತಾ ಇದಾರೆ. ಸೋಲೋದು ಗ್ಯಾರಂಟಿ ಅಂತ ಗೊತ್ತಾಗಿದೆ. ಹೀಗಾಗಿ ಸುಳ್ಳು ಆರೋಪ ಮಾಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು. 

 

ಬೊಮ್ಮಾಯಿ ಭ್ರಷ್ಟಾಚಾರದ ಪಿತಾಮಹ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಈ ದೇಶದಲ್ಲಿ ಮೊದಲನೇ ಹಗರಣ ಪ್ರಾರಂಭ ಆಗಿದ್ದೇ ಕಾಂಗ್ರೆಸ್‌ನಿಂದ. ಜೀಪ್ ಹಗರಣ ಮಾಡಿ ಅಂದು ಡಿಫೆನ್ಸ್ ಮಿನಿಸ್ಟರ್ ರಾಜೀನಾಮೆ ನೀಡಿದ್ರು. ಅಲ್ಲಿಂದಲೇ ಈ ದೇಶದಲ್ಲಿ ಭ್ರಷ್ಟಾಚಾರ ಆರಂಭ ಆಯ್ತು. ಭ್ರಷ್ಟಾಚಾರ ಕಾಂಗ್ರೆಸ್ಸಿನ ಅವಿಭಾಜ್ಯ ಅಂಗ. ಇನ್ನು ಡಿಕೆ ಶಿವಕುಮಾರ್ ಬಗ್ಗೆ ನಾನು ಏನು ಹೇಳಲಿ?ಅವರು ಬಹಳ ಸ್ವಚ್ಛವಿರುವ ಮನುಷ್ಯ. ಅವರಷ್ಟು ಸ್ವಚ್ಚ ಮನುಷ್ಯ ರಾಜಕಾರಣದಲ್ಲಿ ಯಾರೂ ಇಲ್ಲ ಎಂದು ವ್ಯಂಗ್ಯವಾಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು