ಬುಧವಾರ, ಮೇ 25, 2022
27 °C

ಸೋಂಕಿನ ಲಕ್ಷಣ ಇರುವವರು, ಅಂ.ರಾ ಪ್ರಯಾಣಿಕರಿಗಷ್ಟೇ ಕೋವಿಡ್‌ ಪರೀಕ್ಷೆ: ಸುಧಾಕರ್

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಸಲಹೆಯಂತೆ, ಕೋವಿಡ್‌ ಪರೀಕ್ಷಾ ಮಾರ್ಗಸೂಚಿಯನ್ನು ರಾಜ್ಯದಲ್ಲಿ ಪರಿಷ್ಕರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಹೇಳಿದ್ದಾರೆ.

ಈ ಸಂಬಂಧ ʼಕೂʼ ತಾಣದ ಮೂಲಕ ಮಾಹಿತಿ ನೀಡಿರುವ ಅವರು, ಸೋಂಕಿನ ಲಕ್ಷಣಗಳು ಇರುವವರು, ಕೋವಿಡ್‌ನಿಂದ ಅಪಾಯದಲ್ಲಿರುವ ಗುಂಪು ಹಾಗೂ ಅಂತರರಾಷ್ಟ್ರೀಯ ಪ್ರಯಾಣಿಕರನ್ನು ಮಾತ್ರವೇ ಪರೀಕ್ಷೆಗೆ ಒಳಪಡಿಸುವಂತೆ ಐಸಿಎಂಆರ್‌ ಸಲಹೆ ನೀಡಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸೋಂಕಿತರ ಸಂಪರ್ಕಕಕ್ಕೆ ಬಂದವರೆಲ್ಲರಿಗೂ ಕೋವಿಡ್ ಪರೀಕ್ಷೆ ಅಗತ್ಯವಿಲ್ಲ: ಐಸಿಎಂಆರ್

ಐಸಿಎಂಆರ್ ಇತ್ತೀಚೆಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಸೋಂಕಿನ ಲಕ್ಷಣವಿಲ್ಲದವರು, ಹೋಂ ಐಸೋಲೇಷನ್‌ ನಿಯಮಾವಳಿ ಪ್ರಕಾರ ಗುಣಮುಖರಾದವರು, ಕೋವಿಡ್ ಚಿಕಿತ್ಸಾ ಕೇಂದ್ರಗಳಿಂದ ಬಿಡುಗಡೆಯಾಗುತ್ತಿರುವವರು, ಅಂತರರಾಜ್ಯ ಪ್ರಯಾಣಿಕರು ಸಹ ಕೋವಿಡ್ ಪರೀಕ್ಷೆಗೆ ಒಳಗಾಗಬೇಕಿಲ್ಲ ಎಂದು ಪ್ರಕಟಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು