ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಾಂಶಗಳು: ಕೋವಿಡ್‌ ಹೆಚ್ಚಳ; ವಾರಾಂತ್ಯ ಕರ್ಫ್ಯೂನಲ್ಲಿ ಏನಿರುತ್ತೆ, ಏನಿರಲ್ಲ?

Last Updated 5 ಜನವರಿ 2022, 4:23 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಪ್ರಕರಣಗಳು ಏಕಾಏಕಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇದೇ ಶುಕ್ರವಾರದಿಂದ (ಜ.7) ರಾಜ್ಯದಾದ್ಯಂತ ವಾರಾಂತ್ಯ ಕರ್ಫ್ಯೂ ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ.

ವಾರಾಂತ್ಯ ಕರ್ಫ್ಯೂನಲ್ಲಿ ಏನಿರುತ್ತೆ? ಏನಿರುವುದಿಲ್ಲ? ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಓದಿ:ಕೋವಿಡ್‌: ರಾಜ್ಯದಾದ್ಯಂತ ವಾರಾಂತ್ಯದ ಕರ್ಫ್ಯೂ, ಸಭೆ– ರ‍್ಯಾಲಿಗಳಿಗೆ ನಿರ್ಬಂಧ

ಏನೆಲ್ಲ ಇರುತ್ತೆ...

* ಮೆಡಿಕಲ್ ಸ್ಟೋರ್, ಆಸ್ಪತ್ರೆಗಳು ಕಾರ್ಯನಿರ್ವಹಿಸಲಿವೆ.
* ದಿನಸಿ ಅಂಗಡಿ, ಹಾಲು, ತರಕಾರಿ, ಔಷಧ, ಪೆಟ್ರೋಲ್ ಮತ್ತಿತರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ
* ಹೋಟೆಲ್‌ಗಳಲ್ಲಿ ಪಾರ್ಸೆಲ್ ಸೇವೆ ಮಾತ್ರ ಇರುತ್ತದೆ
* ಐಟಿ ಹಾಗೂ ಇತರೆ ಉದ್ಯಮ ಸಂಸ್ಥೆಗಳ ಸಿಬ್ಬಂದಿ ಗುರುತಿನ ಚೀಟಿಯೊಂದಿಗೆ ಸಂಚಾರಕ್ಕೆ ಅನುಮತಿ
*ಇ–ಕಾಮರ್ಸ್‌ ಸೇವೆಗೆ ಅವಕಾಶ
* ರೈಲು, ವಿಮಾನ, ಬಸ್‌ ಸಂಚಾರ ಇರಲಿದೆ
* ಪ್ರಯಾಣ ಚೀಟಿ ಇರುವವರು ಆಟೋ, ಟ್ಯಾಕ್ಸಿ ಬಳಸಲು ಅವಕಾಶ

ಏನೆಲ್ಲ ಇರುವುದಿಲ್ಲ...

* ಸಾರ್ವಜನಿಕ ಉದ್ಯಾನಗಳು ಬಂದ್‌
* ಯಾವುದೇ ‍ಪ್ರತಿಭಟನೆ, ಜಾತ್ರೆ, ರ‍್ಯಾಲಿ, ಮೆರವಣಿಗೆಗೆ ಅವಕಾಶ ಇರುವುದಿಲ್ಲ.
* ಶಾಲಾ–ಕಾಲೇಜ್‌ಗಳು ಬಂದ್‌
* ತುರ್ತು ಸೇವೆ ಬಿಟ್ಟು ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲ.
* ಅನಗತ್ಯ ಓಡಾಟ, ಸಂಚಾರಕ್ಕೆ ಅವಕಾಶ ಇಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT