ಮಂಗಳವಾರ, ಮಾರ್ಚ್ 28, 2023
23 °C

ಸೆ.14ರಿಂದ ರವಿ ಕೃಷ್ಣಾರೆಡ್ಡಿ 'ಚಲಿಸು ಕರ್ನಾಟಕ' ಸೈಕಲ್ ಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: 'ರಾಜ್ಯದ ಜನರಿಗೆ ಪ್ರಾಮಾಣಿಕ ಮತ್ತು ಜನಪರ ರಾಜಕಾರಣದ ಅಗತ್ಯದ ಕುರಿತು ಅರಿವು ಮೂಡಿಸುವುದು ಹಾಗೂ ಜನರ ಸಮಸ್ಯೆಗಳನ್ನು ಆಲಿಸುವ ಸಲುವಾಗಿ ಇದೇ 14ರಿಂದ ರಾಜ್ಯದಾದ್ಯಂತ 2,700 ಕಿ.ಮೀಗಳ 'ಚಲಿಸು ಕರ್ನಾಟಕ' ಸೈಕಲ್‍ ಯಾತ್ರೆ ಹಮ್ಮಿಕೊಳ್ಳಲಾಗಿದೆ' ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ತಿಳಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,'ಕೊರೊನಾ ನೆಪವಾಗಿಟ್ಟುಕೊಂಡು, ಸರ್ಕಾರದಲ್ಲಿ ಭ್ರಷ್ಟಾಚಾರ ಅವ್ಯಾಹತವಾಗಿ ನಡೆಯುತ್ತಿದೆ. ಕೇವಲ ಅಧಿಕಾರ ಹಾಗೂ ಹಣ ಲೂಟಿ ಮಾಡುವಲ್ಲಿ ಮೂರೂ ಪಕ್ಷಗಳ ಗಮನವಿದೆ. ಭ್ರಷ್ಟ ಸರ್ಕಾರದ ಬಗ್ಗೆ ಜನರಿಗೆ ಅರಿವು ಮೂಡಿಸಿ, ಉಜ್ವಲ ಭವಿಷ್ಯದೆಡೆಗೆ ಕರೆತರುವ ಉದ್ದೇಶದಿಂದ ಈ ಯಾತ್ರೆ ಕೈಗೊಂಡಿದ್ದೇವೆ' ಎಂದರು.

'ಮೂರು ಹಂತಗಳಲ್ಲಿ ಸೈಕಲ್ ಯಾತ್ರೆ ನಡೆಯಲಿದ್ದು, ಮೊದಲ ಹಂತದ ಯಾತ್ರೆ ಸೆ.14ರಂದು ಕೋಲಾರದಿಂದ ಆರಂಭವಾಗಿ ದಕ್ಷಿಣ ಭಾಗದ ಜಿಲ್ಲೆಗಳನ್ನು ಪೂರೈಸಿ, ಶಿರಾದಲ್ಲಿ ಮುಕ್ತಾಯವಾಗಲಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಅ.5ರಿಂದ ಎರಡನೇ ಹಂತ ಹಾಗೂ ನವೆಂಬರ್‌ನಲ್ಲಿ ಕರಾವಳಿ, ಮಲೆನಾಡು ಭಾಗಗಳಲ್ಲಿ ಮೂರನೇ ಹಂತದ ಸೈಕಲ್ ಯಾತ್ರೆ ಪೂರ್ಣಗೊಳ್ಳಲಿದೆ. ಯಾತ್ರೆಯಲ್ಲಿ ಭಾಗವಹಿಸಲು http://www.krsparty.org/registration/cycle.php ಮೂಲಕ ನೋಂದಣಿ ಮಾಡಿಕೊಳ್ಳಬಹುದು' ಎಂದವರು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು