ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗಿ: 5 ಮರಣ, ಪ್ರಕರಣಗಳ ಸಂಖ್ಯೆ 5,185ಕ್ಕೆ ಏರಿಕೆ

Last Updated 10 ನವೆಂಬರ್ 2021, 20:36 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಡೆಂಗಿ ಜ್ವರ ಪೀಡಿತರಲ್ಲಿ ಐವರು ಮೃತಪಟ್ಟಿರುವುದು ದೃಢಪಟ್ಟಿದೆ. ಈವರೆಗೆಈ ಜ್ವರಕ್ಕೆ ಒಳಪಟ್ಟವರ ಸಂಖ್ಯೆ 5,185ಕ್ಕೆ ಏರಿಕೆಯಾಗಿದೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಡೆಂಗಿಪ್ರಕರಣಗಳು ವರದಿಯಾಗಿವೆ. 17 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಮೂರಂಕಿಯಲ್ಲಿದೆ.ಈ ವರ್ಷ ಮೊದಲ ಆರು ತಿಂಗಳ ಅವಧಿಯಲ್ಲಿಡೆಂಗಿನಿಯಂತ್ರಣದಲ್ಲಿತ್ತು. ಮಳೆ ಹೆಚ್ಚಳವಾದ ಬಳಿಕ ಈ ಜ್ವರಕ್ಕೆ ಒಳಪಡುವವರ ಸಂಖ್ಯೆ ಏರುಗತಿ ಪಡೆದುಕೊಂಡಿದೆ.

ಕಳೆದ ವರ್ಷ 3,823 ಮಂದಿಯಲ್ಲಿಡೆಂಗಿಜ್ವರ ಕಾಣಿಸಿಕೊಂಡಿತ್ತು. ಅವರಲ್ಲಿ 5 ಮಂದಿ ಮೃತಪಟ್ಟಿದ್ದರು.

ಈ ವರ್ಷ ಬೆಂಗಳೂರಿನಲ್ಲಿ ಅತೀ ಹೆಚ್ಚು ಪ್ರಕರಣಗಳು ದೃಢಪಟ್ಟಿದ್ದು, 971 ಮಂದಿಡೆಂಗಿಜ್ವರ ಎದುರಿಸಿದ್ದಾರೆ.ಶಿವಮೊಗ್ಗದಲ್ಲಿ 381,ಕಲಬುರಗಿಯಲ್ಲಿ 369, ಉಡುಪಿಯಲ್ಲಿ 312, ಕೊಪ್ಪಳದಲ್ಲಿ 268,ದಾವಣಗೆರೆಯಲ್ಲಿ 245,ವಿಜಯಪುರದಲ್ಲಿ 237, ದಕ್ಷಿಣ ಕನ್ನಡದಲ್ಲಿ 231,ಬಳ್ಳಾರಿಯಲ್ಲಿ 227, ಹಾವೇರಿಯಲ್ಲಿ 198,ಮಂಡ್ಯದಲ್ಲಿ 188,ಗದಗದಲ್ಲಿ 184,ಚಿತ್ರದುರ್ಗದಲ್ಲಿ 152,ತುಮಕೂರಿನಲ್ಲಿ 143,ಯಾದಗಿರಿಯಲ್ಲಿ 142, ಬೀದರ್‌ನಲ್ಲಿ 128 ಹಾಗೂ ಕೋಲಾರದಲ್ಲಿ 113 ಮಂದಿಡೆಂಗಿಪೀಡಿತರಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ 100ರ ಗಡಿಯೊಳಗೆ ಇವೆ.

ರಾಜ್ಯದ 28 ಜಿಲ್ಲೆಗಳಲ್ಲಿಚಿಕೂನ್‌ ಗುನ್ಯಾ ಪ್ರಕರಣಗಳು ವರದಿಯಾಗಿವೆ.ಈವರೆಗೆ ಈ ಮಾದರಿಯ ಜ್ವರಕ್ಕೆ ಒಳಗಾದವರ ಸಂಖ್ಯೆ1,621ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT