ಬುಧವಾರ, ಅಕ್ಟೋಬರ್ 28, 2020
28 °C
ಸಿಬಿಐ ದಾಳಿ ಮುಕ್ತಾಯಗೊಂಡ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಡಿಕೆಶಿ ಮಾತು

‘ಈ ಡಿ.ಕೆ. ಶಿವಕುಮಾರ್‌ ಹೆದರುವ ಮಗ ಅಲ್ಲ, ಕುತಂತ್ರಕ್ಕೆ ಹೆದರುವುದಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DK Shivakumar

ಬೆಂಗಳೂರು: ‘ಈ ಡಿ.ಕೆ. ಶಿವಕುಮಾರ್‌ ಹೆದರುವ ಮಗ ಅಲ್ಲ, ಕುತಂತ್ರಕ್ಕೆ ಹೆದರುವ ಮಗ ನಾನಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಗುಡುಗಿದರು.

ಮನೆಯ ಮುಂದೆ ಜಮಾಯಿಸಿದ್ದ ಅಭಿಮಾನಿಗಳು ಮತ್ತು ಕಾಂಗ್ರೆಸ್‌ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್‌, ‘30 ವರ್ಷಗಳ ರಾಜಕಾರಣದಲ್ಲಿ ಪಕ್ಷದ ಕಾರ್ಯಕರ್ತನಾಗಿ, ಶಾಸಕನಾಗಿ, ಸಚಿವನಾಗಿ, ಸಂಸದನಾಗಿ ನಾನು ಯಾವುದೇ ತಪ್ಪು ಮಾಡಿಲ್ಲ’ ಎಂದರು.

‘ದಾಳಿ ಮಾಡಿ ನನ್ನ ಬಾಯಿ ಮುಚ್ಚಿಸಲು ಯತ್ನಿಸುವವರಿಗೆ ದೇವರು ಒಳ್ಳೆಯದು ಮಾಡಲಿ. ನಾನು ಅಧಿಕಾರಕ್ಕೆ ಅಂಟಿ ಕುಳಿತುಕೊಳ್ಳುವವನಲ್ಲ. ಉಪ ಚುನಾವಣೆ ಮುಗಿಯುವರೆಗೆ ಈ ದಾಳಿ ಮುಂದುವರಿಯಲಿದೆ’ ಎಂದೂ ಹೇಳಿದರು.

‘ಸಿಬಿಐ ಅಧಿಕಾರಿಗಳು ಮನೆಯಲ್ಲಿ ಸೀರೆ, ಪ್ಯಾಂಟು ಹೀಗೆ ಎಲ್ಲ ಲೆಕ್ಕ ತೆಗೆದುಕೊಂಡಿದ್ದಾರೆ. ಸರ್ಕಾರ ಹೇಳಿದಂತೆ ಅಧಿಕಾರಿಗಳು ಕೇಳುತ್ತಾರೆ. ಸಿಬಿಐನವರಿಗೆ ವೃತ್ತಿಪರತೆ ಇದೆ. ಇ.ಡಿ ಅಧಿಕಾರಿಗಳು ಈ ರೀತಿ ಅಲ್ಲ’ ಎಂದೂ ಹೇಳಿದರು.

‘ಪಕ್ಷದ ಕಾರ್ಯಕರ್ತರು ಇಟ್ಟಿರುವ ಅಭಿಮಾನಕ್ಕೆ ಯಾವ ಬೆಲೆ ಕೊಡಲು ಸಾಧ್ಯ ಇಲ್ಲ. ಪಕ್ಷಕ್ಕೆ ಕಳಂಕ ತರುವ ಕೆಲಸವನ್ನು ಈ ಡಿ.ಕೆ. ಶಿವಕುಮಾರ್‌ ಕುಟುಂಬ ಮಾಡಿಲ್ಲ’ ಎಂದೂ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು