ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಹರೂ ಟೀಕಿಸುವ ಯೋಗ್ಯತೆ ಇದೆಯೆ: ಮಹದೇವಪ್ಪ

ಬಿಜೆಪಿ ನಾಯಕರಿಗೆ ಡಾ.ಎಚ್‌.ಸಿ. ಮಹದೇವಪ್ಪ ಪ್ರಶ್ನೆ
Last Updated 15 ಆಗಸ್ಟ್ 2021, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ಆಗರ್ಭ ಶ್ರೀಮಂತರಾಗಿದ್ದರೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ಜೈಲುವಾಸ ಅನುಭವಿಸಿದ್ದ ಜವಾಹರ ಲಾಲ್‌ ನೆಹರೂ, ನಂತರದ ದಿನಗಳಲ್ಲಿ ನವ ಭಾರತದ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದರು. ಅವರನ್ನು ಟೀಕಿಸುವ ಯೋಗ್ಯತೆ ಕೋಮುವಾದಿಗಳಾಗಿರುವ ಬಿಜೆಪಿ ನಾಯಕರಿಗೆ ಇದೆಯೆ’ ಎಂದು ಕಾಂಗ್ರೆಸ್‌ ಮುಖಂಡ ಡಾ.ಎಚ್‌. ಮಹದೇವಪ್ಪ ಪ್ರಶ್ನಿಸಿದ್ದಾರೆ.

‘ನೆಹರೂ ಅವರ ದೂರದೃಷ್ಟಿಯ ಫಲವಾಗಿಯೇ ದೇಶ ಅಭಿವೃದ್ಧಿ ಪಥದಲ್ಲಿ ಸಾಗಿತು. ನೆಹರೂ ಅವರು ಸ್ವಾತಂತ್ರ್ಯ ಹೋರಾಟ ನಡೆಸುತ್ತಿದ್ದಾಗ ಇಂದಿನ ಕೂಗುಮಾರಿಗಳಾಗಿರುವ ಮನುವಾದಿಗಳ ಗುಂಪಿನವರು ಬ್ರಿಟಿಷರ ಸೇವಕರಾಗಿದ್ದರು. ನೆಹರೂ ಅವರ ಹೋರಾಟದ ಜೀವನವನ್ನು ಮರೆತು ಮಾತನಾಡುವವರಿಗೆ ಎಂದಿಗೂ ಕ್ಷಮೆ ಇಲ್ಲ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆಹರೂ ಅವರ ಕೊಡುಗೆಗಳನ್ನು ಸ್ಮರಿಸಿದ್ದಾರೆ. ಆದರೆ, ಅವರದ್ದೇ ಪಕ್ಷದ ಕೋಮುವ್ಯಾದಿ ಹುಳುವೊಂದು ಮೂರನೇ ದರ್ಜೆಯ ಪ್ರಚಾರಕ್ಕಾಗಿ ನೆಹರೂ ಅವರನ್ನು ಟೀಕಿಸುವ ತಂತ್ರದ ಮೊರೆ ಹೋಗಿರುವುದು ಅವರ ಮೂರ್ಖತನದ ಪರಮಾವಧಿ. ಮತ್ತೊಮ್ಮೆ ಹುಟ್ಟಿ ಬಂದು ಅಸಮಾನತೆಯ ಸಂಕಷ್ಟ ಮತ್ತು ಜಾತಿ ಕಾರಣದ ನೋವುಗಳನ್ನು ಅನುಭವಿಸಿದರೆ ಮಾತ್ರ ಇವರಿಗೆ ನೆಹರೂ ಕುರಿತು ಮಾತನಾಡುವ ಅರ್ಹತೆ ದೊರೆಯುತ್ತದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT