ಶನಿವಾರ, ಫೆಬ್ರವರಿ 4, 2023
28 °C

ಭೂವೀಕ್ಷಣಾ ಉಪಗ್ರಹ–06 ಯಶಸ್ವಿ ಕಾರ್ಯನಿರ್ವಹಣೆ: ಹೊಸ ಚಿತ್ರಗಳು ರವಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಇದೇ 26 ರಂದು ಉಡಾವಣೆ ಮಾಡಿದ್ದ ಭೂವೀಕ್ಷಣಾ ಉಪಗ್ರಹ–06 ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಉಪಗ್ರಹವು ಸೆರೆ ಹಿಡಿದಿರುವ ಚಿತ್ರಗಳನ್ನು ಭೂಮಿಗೆ ಕಳುಹಿಸುತ್ತಿದೆ ಎಂದು ಇಸ್ರೊ ಹೇಳಿದೆ.

ಭಾರತದ ಹಿಮಾಲಯ ಪ್ರದೇಶ, ಗುಜರಾತ್‌ನ ಕಛ್ ಪ್ರದೇಶ ಮತ್ತು ಅರಬ್ಬಿ ಸಮುದ್ರದ ಪ್ರದೇಶಗಳ ಚಿತ್ರಗಳನ್ನು ಉಪಗ್ರಹ ಸೆರೆ ಹಿಡಿದಿದ್ದು, ತೆಲಂಗಾಣದ ರಾಷ್ಟ್ರೀಯ ದೂರ ಸಂವೇದನೆ ಕೇಂದ್ರಕ್ಕೆ ಮೊದಲ ಚಿತ್ರಗಳು ಬಂದಿವೆ.

ಓಷನ್ ಕಲರ್‌ ಮಾನಿಟರ್‌ (ಓಸಿಎಂ) ಮತ್ತು ಸೀ ಸರ್ಫೇಸ್‌ ಟೆಂಪರೇಚರ್‌ ಮಾನಿಟರ್‌ (ಎಸ್‌ಎಸ್‌ಟಿಎಂ) ಸೆನ್ಸರ್ (ಆನ್‌ ಬೋರ್ಡ್‌ ಇಒಎಸ್‌–06) ಚಿತ್ರ ಸೆರೆ ಹಿಡಿದಿವೆ. ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್‌ ಅವರು ವರ್ಚುವಲ್ ಆಗಿ ಚಿತ್ರಗಳನ್ನು ಬಿಡುಗಡೆ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು