ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ಕರ್ನಾಟಕ: 40 ಸಾವಿರ ಹುದ್ದೆಗಳು ಖಾಲಿ

ಹುದ್ದೆಗಳ ಭರ್ತಿಗೆ ಕಾಂಗ್ರಸ್‌ನ ಈಶ್ವರ ಖಂಡ್ರೆ ಒತ್ತಾಯ
Last Updated 15 ಮಾರ್ಚ್ 2022, 21:59 IST
ಅಕ್ಷರ ಗಾತ್ರ

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ 40 ಸಾವಿರ ಹುದ್ದೆಗಳು ಖಾಲಿ ಇದ್ದು ಅವುಗಳನ್ನು ಭರ್ತಿ ಮಾಡಬೇಕು ಎಂದು ಕಾಂಗ್ರೆಸ್‌ನಈಶ್ವರಖಂಡ್ರೆ ಒತ್ತಾಯಿಸಿದರು.

ವಿಧಾನಸಭೆಯಲ್ಲಿ ಬುಧವಾರ ಬಜೆಟ್‌ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೋವಿಡ್‌ ಹೆಸರಿನಲ್ಲಿ ನೇಮಕಾತಿ ನಿಲ್ಲಿಸಲಾಗಿತ್ತು. ನೇಮಕಾತಿಗೆ ಇದ್ದ ತಡೆಯನ್ನು ಇತ್ತೀಚೆಗೆ ತೆರವುಗೊಳಿಸಲಾಗಿದೆ. ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದರು.

ಪ್ರಾಥಮಿಕ ಶಾಲೆಗಳಲ್ಲಿ 14,042, ಪ್ರೌಢಶಾಲೆಗಳಲ್ಲಿ 1,980 ಇವೆರಡೂ ಸೇರಿದರೆ ಒಟ್ಟು 16,022 ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. 15 ಸಾವಿರ ಭರ್ತಿ ಮಾಡಿದರೂ ಇನ್ನೂ 11 ಸಾವಿರ ಹುದ್ದೆಗಳು ಖಾಲಿ ಉಳಿಯುತ್ತವೆ. ಕಲಬುರಗಿ ವಿಶ್ವವಿದ್ಯಾಲಯದಲ್ಲಿ 969 ಹುದ್ದೆಗಳ ಪೈಕಿ ಕೇವಲ 273 ಮಾತ್ರ ಭರ್ತಿ ಮಾಡಿದ್ದು, ಶೇ 72 ರಷ್ಟು ಹುದ್ದೆಗಳು ಖಾಲಿ ಉಳಿದಿವೆ ಎಂದು ಖಂಡ್ರೆ ಹೇಳಿದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಲಾಯಿತು. ಮಂಡಳಿಯನ್ನು ದುರ್ಬಲಗೊಳಿಸಲು ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡುವ ಕಾಯ್ದೆಯನ್ನು ತರಲಾಯಿತು. ಈ ಮಂಡಳಿ ಈವರೆಗೆ ಒಂದೂ ಸಭೆಯನ್ನು ನಡೆಸಿಲ್ಲ. ಮಂಡಳಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಅವರು ದೂರಿದರು.

ಅಮೃತ್‌ ಯೋಜನೆಯಡಿ ₹3 ಸಾವಿರ ಕೋಟಿಯನ್ನು ಘೋಷಣೆ ಮಾಡಲಾಗಿದ್ದು, ಅದನ್ನು ಹೇಗೆ ಖರ್ಚು ಮಾಡುತ್ತೀರಿ ಎಂಬ ವಿವರಗಳಿಲ್ಲ. ಕಾಮಗಾರಿಗಳನ್ನು ಸಮಯ ಬದ್ಧವಾಗಿ ಪೂರ್ಣಗೊಳಿಸಲು ತಿಂಗಳಿಗೆ ಒಮ್ಮೆಯಾದರೂ ಪರಿಶೀಲನಾ ಸಭೆಯನ್ನು ನಡೆಸಬೇಕು ಎಂದು ಖಂಡ್ರೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT