ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಸಚಿವ ಮುಮ್ತಾಜ್‌ ಅಲಿ ಖಾನ್ ನಿಧನ

Last Updated 7 ಜೂನ್ 2021, 5:06 IST
ಅಕ್ಷರ ಗಾತ್ರ

ಬೆಂಗಳೂರು:ಮಾಜಿ ಸಚಿವ ಪ್ರೊ. ಮುಮ್ತಾಜ್‌ ಅಲಿ ಖಾನ್ (94) ಅವರು ವಯೋಸಹಜ ಕಾಯಿಲೆಯಿಂದ ಗಂಗಾನಗರದಲ್ಲಿರುವ ತಮ್ಮ‌ ನಿವಾಸದಲ್ಲಿ ಸೋಮವಾರ ಬೆಳಿಗ್ಗೆ ನಿಧನರಾದರು.

ಅವರಿಗೆ ಪತ್ನಿ, ಮಗಳು ಇದ್ದಾರೆ. 2008ರಲ್ಲಿ ಬಿ.ಎಸ್‌. ಯಡಿಯಾರಪ್ಪ ನೇತೃತ್ವದ ಸರ್ಕಾರದಲ್ಲಿ ಅವರು ಅಲ್ಪಸಂಖ್ಯಾತ ಕಲ್ಯಾಣ, ಹಜ್, ವಕ್ಫ್ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

30 ವರ್ಷಗಳಿಂದ ಬೆಂಗಳೂರು ನಗರದ ಆರ್‌ಟಿನಗರದಲ್ಲಿ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಯನ್ನು ನಡೆಸುತ್ತಿದ್ದು, ಈ ಶಾಲೆಯ ಮಕ್ಕಳಿಗೆ ಸಂಪೂರ್ಣವಾಗಿ ಉಚಿತ ಶಿಕ್ಷಣ, ಮಧ್ಯಾಹ್ನ ಉಪಹಾರ, ಪಠ್ಯಪುಸ್ತಕ ಸಮವಸ್ತ್ರಗಳನ್ನು ನೀಡುತ್ತಿದ್ದಾರೆ. ತಮಗೆ ಬರುತ್ತಿದ್ದ ಪಿಂಚಣಿ ಮತ್ತು ಇತರೆ ಸ್ವಂತ ಮೂಲಗಳ ಆದಾಯವನ್ನು ಬಡಮಕ್ಕಳಿಗೆ ವಿತರಿಸುತ್ತಿದ್ದರು. ಅವರ ಪತ್ನಿ ಈ ಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಅವರು 1982ರಲ್ಲಿ ಸ್ವಯಂ ನಿವೃತ್ತಿಯಾಗಿದ್ದರು. ತಮ್ಮ ಮೃತ ಮಗನ ಹೆಸರಿನಲ್ಲಿ (ನೂರ್ ಅಹ್ಮದ್ ಅಲಿಖಾನ್ ಸ್ಮಾರಕ ವಿದ್ಯಾಸಂಸ್ಥೆ) ಶಾಲೆ ನಡೆಸುತ್ತಿದ್ದರು. ಆರಂಭದಲ್ಲಿ ಶಾಲೆ ಹೆಸರು ಸಲಾಮತ್ ಪ್ರಾಥಮಿಕ ಮತ್ತು ಪ್ರೌಢಶಾಲೆ ಎಂದು ಹೆಸರಿಟ್ಟಿದ್ದರು. 2008ರಲ್ಲಿ ಅಪಘಾತದಲ್ಲಿ ಮೃತಪಟ್ಟ ತಮ್ಮ 18 ವಯಸ್ಸಿನ ಮಗನ ಸ್ಮರಣಾರ್ಥ ಶಾಲೆಯ ಹೆಸರು ಬದಲಿಸಿದ್ದರು.

ಖುದ್ದುಸ್ ಸಾಹೇಬ್ ಖಬ್ರಸ್ತಾನದಲ್ಲಿ ಮಧ್ಯಾಹ್ನ 1.30 ಅಂತ್ಯ ಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT