ಗುರುವಾರ , ಮೇ 26, 2022
30 °C

ಖಡಕ್‌ ಆಗಿದ್ದಕ್ಕೆ ಹಿಂದಿನ ಸಾಲಿಗೆ: ಮಾಧುಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಖಡಕ್‌ ಆಗಿದ್ದ ಕಾರಣಕ್ಕೆ ನಾನು ಹಿಂದಕ್ಕೆ (ವಿಧಾನಸಭೆಯಲ್ಲಿ ಮೊದಲ ಸಾಲಿನಿಂದ ಎರಡನೇ ಸಾಲಿಗೆ) ಬಂದಿದ್ದೇನೆ’ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಕೋಪದಿಂದ ಹೇಳಿದರು.

ವಿಧಾನಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಶಿವಾನಂದ ಪಾಟೀಲ, ‘ಮುಳವಾಡ ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆಯನ್ನು ಕಾರ್ಯನಿರ್ವಾಹಕ ಎಂಜಿನಿಯರ್ ಅಕ್ರಮವಾಗಿ ಒಡೆಸಿದ್ದಾರೆ. ಈ ಬಗ್ಗೆ ವರ್ಷದ ಹಿಂದೆಯೇ ಜಲಸಂಪನ್ಮೂಲ ಸಚಿವರಿಗೆ ಪತ್ರ ಬರೆದರೂ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

ಆಗ ಎದ್ದು ನಿಂತ ಮಾಧುಸ್ವಾಮಿ, ‘ಸಭಾಧ್ಯಕ್ಷರೇ, ಇದಕ್ಕೆ ಉತ್ತರ ನೀಡುವಂತೆ ನಿಮ್ಮ ಕಚೇರಿಯ ಸಿಬ್ಬಂದಿ ನನಗೆ ಪತ್ರ ಕಳುಹಿಸಿದ್ದಾರೆ. ನಿಮ್ಮ ಕಚೇರಿಯಿಂದ ಲೋಪ ಆಗಿದೆ’ ಎಂದರು.

ಆಗ ಶಿವಾನಂದ ಪಾಟೀಲ, ‘ನೀವು ಖಡಕ್‌ ಇದ್ದೀರಿ. ಇದಕ್ಕೆ ನೀವೇ ಉತ್ತರ ಕೊಟ್ಟುಬಿಡಿ’ ಎಂದು ಹೇಳಿದರು.

‘ಖಡಕ್ ಇದ್ದರೆ ಏನೂ ಪ್ರಯೋಜನ ಇಲ್ಲ. ಈಗ ಇಲ್ಲಿಗೆ ಬಂದಿದ್ದೇನಲ್ಲ’ ಎಂದು ನೀರಾವರಿ ಸಚಿವ ಮಾಧುಸ್ವಾಮಿ ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು