ಶುಕ್ರವಾರ, ಜೂನ್ 25, 2021
26 °C

ಕುಮಟಾ ಸಮೀಪ ದೋಣಿ ಮುಳುಗಡೆ: ಮೀನುಗಾರರ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಮಟಾ: ತಾಲ್ಲೂಕಿನ ಧಾರೇಶ್ವರ ಬಳಿ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಟ್ರಾಲರ್ ದೋಣಿಯೊಂದು ಗುರುವಾರ ಮುಳುಗಿದೆ. ಅದರಲ್ಲಿದ್ದ ನಾಲ್ವರು ಮೀನುಗಾರರನ್ನು ಅಕ್ಕಪಕ್ಕದ ದೋಣಿಗಳಲ್ಲಿದ್ದ ಮೀನುಗಾರರು ರಕ್ಷಿಸಿದ್ದಾರೆ.

ನೀರಿನಲ್ಲಿ ಮುಳುಗಿದ ದೋಣಿಯಲ್ಲಿದ್ದ ಮೋಹನ ಕೃಷ್ಣಪ್ಪ ಹರಿಕಾಂತ, ಮಂಜುನಾಥ ಬುದ್ಧು ಹರಿಕಾಂತ, ಮಹೇಂದ್ರ ಶಂಕರ ಗಾವಡಿ ಹಾಗೂ ವಿಠ್ಠಲ ಗಾವಡಿ ಪ್ರಾಣಾಪಾಯದಿಂದ ‍ಪಾರಾಗಿದ್ದಾರೆ. ಅವರನ್ನು ಬೇರೆ ದೋಣಿಯಲ್ಲಿ ತದಡಿ ಬಂದರಿಗೆ ಕರೆದುಕೊಂಡು ಬಂದು, ಅಲ್ಲಿಂದ ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಮುದ್ರದಲ್ಲಿ ಮುಳುಗಿದ್ದ ದೋಣಿಯನ್ನು ಎಳೆದು ದಡಕ್ಕೆ ತರಲಾಗಿದೆ.

‘ವಿಜಯಲಕ್ಷ್ಮೀ– 2’ ಹೆಸರಿನ ಈ ದೋಣಿಯು ಕಿಮಾನಿಯ ಕೇಸರಿ ಮೋಹನ್ ಹರಿಕಾಂತ ಎಂಬುವರಿಗೆ ಸೇರಿದ್ದಾಗಿದೆ ಎಂದು ಮಿನುಗಾರಿಕಾ ಸಹಾಯಕ ನಿರ್ದೇಶಕ ಆರ್.ಬಿ.ಪಾಟೀಲ್ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು