ಜೊತೆಗಿದ್ದ ಸ್ನೇಹಿತರೆಲ್ಲರೂ ಕೈಬಿಟ್ಟರು, ಒಬ್ಬಂಟಿಯಾದೆ: ಎಚ್.ವಿಶ್ವನಾಥ್ ಬೇಸರ
ಚಿತ್ರದುರ್ಗ: ಜೊತೆಗಿದ್ದ ಸ್ನೇಹಿತರೆಲ್ಲರೂ ಬಿಟ್ಟು ಹೋಗಿ ಸಚಿವರಾದರು. ಗಟ್ಟಿಧ್ವನಿಯಲ್ಲಿ ಮಾತನಾಡಿ ಒಬ್ಬಂಟಿಯಾದೆ. ಆದರೆ, ರಾಜ್ಯದ ಜನರು ನನ್ನ ಜೊತೆಗಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬೇಸರ ಹೊರಹಾಕಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಂಬೈಗೆ ತೆರಳಿದ 17 ಜನರ ತಂಡವನ್ನು ನಾನು ಮುನ್ನೆಡಿಸಿದೆ. ಮಂತ್ರಿಯಾಗಬೇಕು ಎಂಬ ಉದ್ದೇಶದಿಂದ ಬಿಜೆಪಿಗೆ ಬಂದಿಲ್ಲ. ಸಚಿವ ಸ್ಥಾನವನ್ನು ಮತ್ತೆ ಕೇಳುವುದಿಲ್ಲ. ರಾಜ್ಯದಲ್ಲಿ ಗಟ್ಟಿ ಧ್ವನಿ ಕೇಳಿಸುತ್ತದೆ ಹೊರತು ಹೇಡಿ ಧ್ವನಿಯಲ್ಲ’ ಎಂದು ಮಾರ್ಮಿಕವಾಗಿ ನುಡಿದರು.
‘ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಅಸಮಾಧಾನ ಮೂಡಿದೆ. ಕೋವಿಡ್‌ಗೆ ಲಸಿಕೆ ನೀಡುವ ಸಂದರ್ಭದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಡಾ.ಸುಧಾಕರ್ ಕೈಯಲ್ಲಿದ್ದರೆ ಅನುಕೂಲವಾಗುತ್ತಿತ್ತು. ಪರಿಸರ ಮತ್ತು ಅರಣ್ಯ ಖಾತೆಯನ್ನು ಬೇರ್ಪಡಿಸಿರುವುದು ಕೂಡ ಅಸಮಂಜಸವಾಗಿದೆ’ ಎಂದು ಹೇಳಿದರು.
‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ಗೋಷ್ಠಿಗೆ ಅವಕಾಶ ಕಲ್ಪಿಸಬೇಕು. ಶಿಷ್ಟ ಸಾಹಿತ್ಯ, ಬಂಡಾಯ ಸಾಹಿತ್ಯದಂತೆ ರಾಜಕೀಯ ಸಾಹಿತ್ಯದ ಬಗ್ಗೆಯೂ ಚರ್ಚೆಯಾಗುವ ಅಗತ್ಯವಿದೆ. ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಪರಿಷತ್ ಅಧ್ಯಕ್ಷ ಮನು ಬಳಿಗಾರ ಹಾಗೂ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ ಅವರ ಗಮನ ಸೆಳೆಯಲಾಗುವುದು’ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.