ಬುಧವಾರ, ಮೇ 25, 2022
28 °C

ಮಾರಿಷಸ್‌ಗೆ ಎಚ್‌ಎಎಲ್‌ ಹೆಲಿಕಾಪ್ಟರ್‌ ರಫ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಿತ್ರ ದೇಶಗಳಿಗೆ ರಕ್ಷಣಾ ಉತ್ಪನ್ನಗಳ ರಫ್ತು ಹೆಚ್ಚಿಸುವ ಕೇಂದ್ರ ಸರ್ಕಾರದ ಉದ್ದೇಶಕ್ಕೆ ಪೂರಕವಾಗಿ ಎಚ್‌ಎಎಲ್‌ ತನ್ನ ಸುಧಾರಿತ ಹಗುರ ಹೆಲಿಕಾಪ್ಟರ್‌ಗಳನ್ನು (ಎಎಲ್‌ಎಚ್‌–3) ರಫ್ತು ಮಾಡುವ ಒಪ್ಪಂದಕ್ಕೆ ಮಾರಿಷಸ್ ಸರ್ಕಾರದ ಜತೆ ಒಪ್ಪಂದಕ್ಕೆ ಸಹಿ ಮಾಡಿದೆ.

ದ್ವೀಪ ರಾಷ್ಟ್ರ ಮಾರಿಷಸ್ ತನ್ನ ಪೊಲೀಸ್‌ ಪಡೆಯಲ್ಲಿ ಈ ಹೆಲಿಕಾಪ್ಟರ್‌ಗಳನ್ನು ಬಳಸಿಕೊಳ್ಳಲಿದೆ. ಈಗಾಗಲೇ ಎಚ್‌ಎಎಲ್ ನಿರ್ಮಿತ ಎಎಲ್‌ಎಚ್‌ ಮತ್ತು ಡೋನಿಯೆರ್‌ 228 ವಿಮಾನಗಳನ್ನು ಬಳಸುತ್ತಿದೆ. ಹೊಸ ಒಪ್ಪಂದ ಎರಡೂ ರಾಷ್ಟ್ರಗಳ ಮಧ್ಯೆ ಮೂರು ದಶಕಗಳಿಂದ ಇರುವ ಬಾಂಧವ್ಯ ಇನ್ನಷ್ಟು ವೃದ್ಧಿಸಲಿದೆ ಎಂದು ಎಚ್‌ಎಎಲ್‌ ಪ್ರಕಟಣೆ ತಿಳಿಸಿದೆ.

ಎಚ್‌ಎಎಲ್‌ ಹೆಲಿಕಾಪ್ಟರ್‌ ವಿಭಾಗದ ಜನರಲ್‌ ಮ್ಯಾನೇಜರ್‌ ಬಿ.ಕೆ.ತ್ರಿಪಾಠಿ ಮತ್ತು ಮಾರಿಷಸ್‌ ಪ್ರಧಾನಿಯವರ ಗೃಹ ವ್ಯವಹಾರಗಳ ಕಾರ್ಯದರ್ಶಿ ಒ.ಕೆ.ದಬ್ಡಿನ್‌ ಅವರು ಕಾನ್ಪುರದ ಎಚ್‌ಎಎಲ್‌ ಕಚೇರಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು.

ಎಎಲ್‌ಎಚ್‌ ಎಂಕೆ–3 ಹೆಲಿಕಾಪ್ಟರ್‌ ಬಹು ಉಪಯೋಗಿ ಮತ್ತು ವಿಭಿನ್ನ ಕಾರ್ಯಾಚರಣೆಗಳಲ್ಲಿ ಬಳಸಬಹುದಾದ 5.5 ಟನ್‌ ದರ್ಜೆಯದ್ದಾಗಿದೆ. ಭಾರತ ಮತ್ತು ವಿದೇಶಗಳಲ್ಲಿ ನೈಸರ್ಗಿಕ ದುರಂತದ ಸಂದರ್ಭಗಳಲ್ಲಿ ಜೀವ ರಕ್ಷಣೆಗೆ ಬಳಸಲಾಗಿದೆ. ಈವರೆಗೆ 335 ಎಎಲ್ಎಚ್‌ಗಳನ್ನು ತಯಾರಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು