ಮಂಗಳವಾರ, ಅಕ್ಟೋಬರ್ 27, 2020
19 °C

ಚಿಕ್ಕಮಗಳೂರಿನಲ್ಲಿ ವರುಣನ ಆರ್ಭಟ: ಹಲವು ಪ್ರದೇಶಗಳು ಜಲಾವೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಧಾರಕಾರವಾಗಿ ಮಳೆಯಾಗುತ್ತಿದೆ.  ಶೃಂಗೇರಿಯ ಕುರುಬಗೇರಿ, ಗಾಂಧಿ ಮೈದಾನ, ಭಾರತೀ ತೀರ್ಥ ರಸ್ತೆ, ನೆಮ್ಮಾರ್‌ ರಸ್ತೆ ಜಲಾವೃತವಾಗಿವೆ. 

ಕೊಪ್ಪ ತಾಲ್ಲೂಕಿನ ನಾರ್ವೆ ಸಮೀಪದ ಆರ್ಡಿಕೊಪ್ಪದಲ್ಲಿ  ಬಾಳೆ, ಅಡಿಕೆ ತೋಟ, ನಾಟಿ ಭತ್ತದ ಗದ್ದೆ ಗಳಿಗೆ ನೀರು ನುಗ್ಗಿದೆ. ಜಯಪುರದಲ್ಲಿ ಅಂಗಡಿ ಮಳಿಗೆಯೊಂದ ಗೋಡೆ ಕುಸಿದಿದೆ.


ಶೃಂಗೇರಿ 

ಮೂಡಿಗೆರೆ ತಾಲ್ಲೂಕಿನ ಜಾವಳಿ ಬಳಿ ಕಾರೊಂದು ಹಳ್ಳಕ್ಕೆ ಪಲ್ಟಿಯಾಗಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. 
ತರೀಕೆರೆ ತಾಲ್ಲೂಕಿನ ಕಲ್ಹತ್ತಿ ಜಲಪಾತ, ಲಿಂಗದಹಳ್ಳಿ ಬಳಿಯ ಭೀಮನ ಹಳ್ಳಗಳು ಭೋರ್ಗರೆಯುತ್ತಿವೆ. ಹೇಮಾವತಿ, ತಂಗಾ, ಭದ್ರಾ ನದಿಯಲ್ಲಿ ನೀರು ಮಟ್ಟ ಏರಿಕೆಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು