ಬೆಂಗಳೂರು: ‘ಮದುವೆಯಾಗುವ ಸಮಯದಲ್ಲಿ 18 ವರ್ಷ ತುಂಬಿರಲಿಲ್ಲ’ ಎಂಬ ಕಾರಣಕ್ಕೆ ಮಹಿಳೆಯೊಬ್ಬರ ಮದುವೆ ಅನೂರ್ಜಿತಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ವನ್ನು ಹೈಕೋರ್ಟ್ ರದ್ದುಪಡಿಸಿದೆ. ಈ ಸಂಬಂಧದ ಮೇಲ್ಮನವಿಯನ್ನು ನ್ಯಾಯ ಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಪುರಸ್ಕರಿಸಿದೆ.

‘ಮದುವೆಯಾದಾಗ 18 ವರ್ಷ ಆಗಿರಬೇಕು ಎಂಬ ನಿಯಮವನ್ನು ಹಿಂದೂ ವಿವಾಹ ಕಾಯ್ದೆಯ ಕಲಂ 11ರ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಆದ್ದರಿಂದ, ಅಪ್ರಾಪ್ತೆ ಎಂಬ ಕಾರಣಕ್ಕೆ ಕಲಂ 11ರ ಪ್ರಕಾರ ವಿವಾಹ ಅನೂರ್ಜಿತ ಗೊಳಿಸುವುದು ಈ ಪ್ರಕರಣಕ್ಕೆ ಅನ್ವಯಿ ಸದು’ ಎಂದು ಪೀಠ ಸ್ಪಷ್ಟಪಡಿಸಿದೆ.

ಮಂಡ್ಯ ಜಿಲ್ಲೆಯ ಸುಶೀಲಾ ಎಂಬುವರು ಮಂಜುನಾಥ್ ಅವರೊಂದಿಗೆ ಹಿಂದೂ ವಿವಾಹ ಕಾಯ್ದೆಯ ಪ್ರಕಾರ 2012ರ ಜೂನ್ 15ರಂದು ಪಾಣಿಗ್ರಹಣ ಮಾಡಿದ್ದರು. ನಂತರ ಪತಿ ಮಂಜುನಾಥ್, ‘ಮದುವೆಯಾಗುವಾಗ ನನ್ನ ಪತ್ನಿ ಅಪ್ರಾಪ್ತೆಯಾಗಿದ್ದರು. ಆದ್ದ
ರಿಂದ, ಈ ಮದುವೆಯನ್ನು ಅನೂರ್ಜಿತ ಗೊಳಿಸಬೇಕು’ ಎಂದು ಕೋರಿ ಕೌಟುಂ ಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಮದುವೆಯನ್ನು ಅನೂರ್ಜಿತಗೊಳಿಸಿತ್ತು. ಈ ಆದೇಶ ಪ್ರಶ್ನಿಸಿ ಸುಶೀಲಾ ಹೈಕೋರ್ಟ್ ಮೆಟ್ಟಿಲೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.