ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಪತಿ ಹುದ್ದೆಗೆ ಎ.ರಂಗಸ್ವಾಮಿ ಉಮೇದುವಾರಿಕೆ ಮರುಪರಿಶೀಲಿಸಿ: ಹೈಕೋರ್ಟ್

Last Updated 13 ಸೆಪ್ಟೆಂಬರ್ 2020, 7:59 IST
ಅಕ್ಷರ ಗಾತ್ರ

ಬೆಂಗಳೂರು:ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಮತ್ತು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆಮೈಸೂರಿನ ಮುಕ್ತ ವಿಶ್ವ ವಿದ್ಯಾಲಯದ(ಕೆಎಸ್‌ಒಯು) ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ಎ. ರಂಗಸ್ವಾಮಿ ಅವರ ಉಮೇದುವಾರಿಕೆಯನ್ನು ಮರುಪರಿಶೀಲನೆ ನಡೆಸುವಂತೆ ರಾಜ್ಯ ಸರ್ಕಾರ ಮತ್ತು ಶೋಧನಾ ಸಮಿತಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಕೆಎಸ್‌ಒಯು ರಿಜಿಸ್ಟ್ರಾರ್ ಡಾ.ಲಿಂಗರಾಜ ಗಾಂಧಿ ಅವರು ನೀಡಿರುವ ಹೇಳಿಕೆಗಳಿಂದ ಪ್ರಭಾವಿತರಾಗದೆ ಅರ್ಹತೆಯ ಮೇಲೆ ಸ್ವತಂತ್ರವಾಗಿ ಮರುಪರಿಶೀಲಿಸುವಂತೆ ನಿರ್ದೇಶನ ನೀಡಿತು.

‘ನಾನು ಈ ಎರಡೂ ವಿಶ್ವವಿದ್ಯಾಲಯಗಳ ಉಪಕುಲಪತಿ ಹುದ್ದೆಗೆ ಆಕಾಂಕ್ಷಿಯಾಗಿದ್ದೆ. ನನ್ನ ವಿರುದ್ಧ ಇಲಾಖಾ ತನಿಖೆಗೆ ಸಮಿತಿ ರಚಿಸಲಾಗಿದೆ ಮತ್ತು ವಿಚಾರಣೆ ಬಾಕಿ ಇದೆ ಎಂದು ಶೋಧನಾ ಸಮಿತಿಗೆ ಡಾ. ಲಿಂಗರಾಜ ಗಾಂಧಿ ಪತ್ರ ಬರೆದಿದ್ದರು. ಆದರೆ, ನನ್ನ ವಿರುದ್ಧ ತನಿಖೆಗೆ ಸಮಿತಿ ರಚನೆಯಾಗಿಲ್ಲ’ ಎಂದು ರಂಗಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ವಿಚಾರಣೆ ನಡೆಸಿದ ನ್ಯಾಯಮೂರ್ತಿಜಾನ್ ಮೈಕೆಲ್ ಕುನ್ಹಾ, ‘ಎ.ರಂಗಸ್ವಾಮಿ ವಿರುದ್ಧ ವಿಚಾರಣೆ ನಡೆಯುತ್ತಿರುವ ಬಗ್ಗೆ ಯಾವುದೇ ದಾಖಲೆಗಳನ್ನು ಕೆಎಸ್‌ಒಯು ಪ್ರಸ್ತುತಪಡಿಸಿಲ್ಲ. ಡಾ. ಲಿಂಗರಾಜ ಗಾಂಧಿ ಅವರೇ ಸ್ವತಃ ಸ್ಪರ್ಧಿಯಾಗಿದ್ದರಿಂದಶೋಧನಾ ಸಮಿತಿಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದಾರೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT