ಬೆಂಗಳೂರು: ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಶ್ವಾನ ಎಂದರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ, ಮನೆಯಲ್ಲಿ ಶ್ವಾನವೊಂದನ್ನು ಅವರು ಪ್ರೀತಿಯಿಂದ ಸಾಕಿದ್ದರು. 'ಸನ್ನಿ' ಎಂಬ ಹೆಸರಿನ ಶ್ವಾನ ಕುಟುಂಬ ಸದಸ್ಯರಂತೆ ಗೃಹ ಸಚಿವರ ಮನೆಯಲ್ಲಿತ್ತು.
ಆದರೆ, ಇಷ್ಟು ದಿನ ಮನೆಯವರೊಂದಿಗೆ ಬೆರೆತು ತುಂಟಾಟ ಆಡುತ್ತಿದ್ದ ಸನ್ನಿ, ಸೋಮವಾರ ಮೃತಪಟ್ಟಿದೆ. ವಯೋಸಹಜವಾಗಿ ಶ್ವಾನ ಮೃತಪಟ್ಟಿದ್ದು, ಬೊಮ್ಮಾಯಿ ಮತ್ತು ಅವರ ಕುಟುಂಬ ಸದಸ್ಯರು ಪ್ರೀತಿಯ ಸನ್ನಿಗೆ ವಿದಾಯ ಹೇಳಿದ್ದಾರೆ.
ಈ ಕುರಿತು ಬೊಮ್ಮಾಯಿ, ‘ಇಂದು ನಮ್ಮ ಮನೆಯ ಮುದ್ದಿನ ನಾಯಿ ‘ಸನ್ನಿ‘ ವಯೋಸಹಜದಿಂದ ಸಾವನ್ನಪ್ಪಿದ್ದು ತೀವ್ರ ದುಃಖ ತಂದಿದೆ. ಕುಟುಂಬದ ಒಬ್ಬ ಸದಸ್ಯನನ್ನು ಕಳೆದುಕೊಂಡಂತಾಗಿದೆ. ಮನೆಯ ಹಾಗೂ ಮನೆಗೆ ಬರುವ ಎಲ್ಲರೊಂದಿಗೆ ಅತ್ಯಂತ ಪ್ರೀತಿಯಿಂದ ಬೆರೆಯುತ್ತಿತ್ತು. ಓಂ ಶಾಂತಿಃ’ ಎಂದುಟ್ವೀಟ್ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.