ಭಾನುವಾರ, ಮೇ 9, 2021
28 °C

ಸಿಡಿ ಪ್ರಕರಣವನ್ನು ಟಿವಿ ಧಾರಾವಾಹಿಗೆ ಹೋಲಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಧಾರಾವಾಹಿ ರೀತಿಯಲ್ಲಿ ಆಡಿಯೊ, ವಿಡಿಯೊ ಬರುತ್ತಿದೆ.‌ ಯುವತಿ ವಿಡಿಯೊ ಬಿಡುಗಡೆ ಮಾಡಿದ್ದಾಳೆ ಎಂದು ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ಪ್ರಕರಣದ ತನಿಖೆಯನ್ನು ನಿಷ್ಠುರವಾಗಿ, ನ್ಯಾಯಸಮ್ಮತವಾಗಿ ಮಾಡುತ್ತೇವೆ. ಯಾರ ಪರ, ಯಾರ ವಿರುದ್ಧ ತನಿಖೆ ಮಾಡುವುದಿಲ್ಲ. ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು,ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರದ್ದು ಎನ್ನಲಾದ ಸಿ.ಡಿ ಪ್ರಕರಣದಲ್ಲಿ ಸಿ.ಡಿ, ಆಡಿಯೊ, ವಿಡಿಯೊ ಇಟ್ಟುಕೊಂಡು ಎಸ್ಐಟಿ ಕೂಲಂಕಷವಾಗಿ ತನಿಖೆ ಮಾಡಲಿದೆ. ವೈಜ್ಞಾನಿಕವಾಗಿ ಪರಿಶೀಲನೆ ಮಾಡಲಾಗುತ್ತದೆ’ ಎಂದು ಹೇಳಿದರು.

‘ಯಾವುದೇ ರೀತಿಯ ಒತ್ತಡ, ಪ್ರಭಾವ ಅಥವಾ ದಾರಿ ತಪ್ಪಿಸುವುದು ನಡೆಯುವುದಿಲ್ಲ. ಎಸ್ಐಟಿ ಕ್ರಮಬದ್ಧವಾಗಿ, ಕಾನೂನುಬದ್ಧವಾಗಿ ತನಿಖೆ ಮಾಡಲಿದೆ’ ಎಂದರು.

ಇವನ್ನೂ ಓದಿ...

ರಮೇಶ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯುವಷ್ಟು ಕಿರುಕುಳ: ಯುವತಿ ವಿಡಿಯೊ

ಅಧರ್ಮ ರಾಜಕಾರಣಕ್ಕೆ ಮುನ್ನುಡಿ ಬರೆದ ‘ಮಹಾನಾಯಕ’ನ ರಾಜೀನಾಮೆ ಯಾವಾಗ?: ಬಿಜೆಪಿ

 ಸಿ.ಡಿ.ಪ್ರಕರಣ: ವೈರಲ್ ಆದ ಆಡಿಯೊದಲ್ಲಿರುವುದೇನು? ಇಲ್ಲಿದೆ ಪೂರ್ಣಪಾಠ

ರಮೇಶ ಜಾರಕಿಹೊಳಿ ವಿರುದ್ಧ ಎಫ್ಐಆರ್: ಲೈಂಗಿಕ ದೌರ್ಜನ್ಯ ದೂರು ದಾಖಲು

ಸಿ.ಡಿ. ಪ್ರಕರಣ: ರಮೇಶ ಜಾರಕಿಹೊಳಿ ವಿರುದ್ಧ ಯುವತಿ ದೂರು –ಇಲ್ಲಿದೆ ವಿವರ

ಸಿಡಿ ಪ್ರಕರಣದ ಷಡ್ಯಂತ್ರ ಕುರಿತು ಬೆಚ್ಚಿ ಬೀಳಿಸುವ ಮಾಹಿತಿ ಸಿಕ್ಕಿದೆ: ಜಾರಕಿಹೊಳಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು