ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಾಪುರದಲ್ಲಿ ಗರಿಷ್ಠ 292 ಮಿ.ಮೀ ಮಳೆ ದಾಖಲು

Last Updated 5 ಜುಲೈ 2022, 6:06 IST
ಅಕ್ಷರ ಗಾತ್ರ

ಮಂಗಳೂರು: ಸೋಮವಾರ ಬೆಳಿಗ್ಗೆ 8.30ರಿಂದ ಮಂಗಳವಾರ ಬೆಳಿಗ್ಗೆ 7 ಗಂಟೆಗೆ ಕೊನೆಗೊಂಡಂತೆ ರಾಜ್ಯದ 50 ಪ್ರದೇಶಗಳಲ್ಲಿ ಗರಿಷ್ಠ ಮಳೆ ದಾಖಲಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ಸಿದ್ದಾಪುರದಲ್ಲಿ ಗರಿಷ್ಠ 292.1 ಮಿ.ಮೀ ಮಳೆ ದಾಖಲಾಗಿದೆ.

ಉಡುಪಿ ಜಿಲ್ಲೆಯ ಕಾರ್ಕಳ ಕುಚ್ಚೂರಿನಲ್ಲಿ 205.5 ಮಿ.ಮೀ, ನಾಲ್ಕೂರಿನಲ್ಲಿ 203.5 ಮಿ.ಮೀ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ನರಿಂಗಾನದಲ್ಲಿ 203 ಮಿ.ಮೀ, ಪಜೀರುದಲ್ಲಿ 190.5 ಮಿ.ಮೀ, ಮಂಗಳೂರು ತಲಪಾಡಿಯಲ್ಲಿ 202 ಮಿ.ಮೀ, ಮಂಜನಾಡಿಯಲ್ಲಿ 198.5 ಮಿ.ಮೀ, ಕೀನ್ಯದಲ್ಲಿ 197.5 ಮಿ.ಮೀ ಮಳೆ ದಾಖಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಸುಪಾ ಅವೇಡಾದಲ್ಲಿ 173.5 ಮಿ.ಮೀ, ಸಿದ್ದಾಪುರ ಕೋಡ್ಕಣಿಯಲ್ಲಿ 153 ಮಿ.ಮೀ, ಶಿವಮೊಗ್ಗ ಜಿಲ್ಲೆಯ ಸಾಗರ ತುಮರಿಯಲ್ಲಿ 168.3 ಮಿ.ಮೀ, ತೀರ್ಥಹಳ್ಳಿ ಹೊನ್ನೆತಾಳುವಿನಲ್ಲಿ 167.5 ಮಿ.ಮೀ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಬೇಗಾರಿನಲ್ಲಿ 149 ಮಿ.ಮೀ ಮಳೆಯಾಗಿದೆ.

ಗರಿಷ್ಠ ಮಳೆಯಾಗಿರುವ 50 ಪ್ರದೇಶಗಳಲ್ಲಿ 24 ಪ್ರದೇಶಗಳು ಉಡುಪಿ ಜಿಲ್ಲೆಗೆ ಸೇರಿದ್ದರೆ, 19 ಪ್ರದೇಶಗಳು ದಕ್ಷಿಣ ಕನ್ನಡ ಜಿಲ್ಲೆಗೆ, ಎರಡು ಉತ್ತರ ಕನ್ನಡ ಜಿಲ್ಲೆ, ಎರಡು ಶಿವಮೊಗ್ಗ ಜಿಲ್ಲೆ, ತಲಾ ಒಂದು ಪ್ರದೇಶ ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಸೇರಿವೆ ಎಂಬ ಮಾಹಿತಿ ಲಭ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT