ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಿ ವಿರುದ್ಧ ದೂರು ನೀಡಿದ ಐಪಿಎಸ್ ಅಧಿಕಾರಿ

ಐಎಫ್‌ಎಸ್‌ ಅಧಿಕಾರಿ ಪತಿ ನಿತೀನ್ ಸುಭಾಷ್ ವಿರುದ್ಧ ವರ್ಟಿಕಾ ಕಟಿಯಾರ್ ವರದಕ್ಷಿಣೆ ಕಿರುಕುಳ ಆರೋಪ
Last Updated 6 ಫೆಬ್ರುವರಿ 2021, 17:56 IST
ಅಕ್ಷರ ಗಾತ್ರ

ಬೆಂಗಳೂರು: ‘ಪತಿ ನಿತೀನ್ ಸುಭಾಷ್ ಹಾಗೂ ಅವರ ಮನೆಯವರು ನಿತ್ಯವೂ ಕಿರುಕುಳ ನೀಡುತ್ತಿದ್ದು, ವರದಕ್ಷಿಣಿ ತರುವಂತೆ ಪೀಡಿಸುತ್ತಿದ್ದಾರೆ. ದೈಹಿಕವಾಗಿ ಹಲ್ಲೆಯನ್ನೂ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿ ಐಪಿಎಸ್ ಅಧಿಕಾರಿ ವರ್ಟಿಕಾ ಕಟಿಯಾರ್ ಅವರು ಕಬ್ಬನ್‌ ಪಾರ್ಕ್‌ ಠಾಣೆಗೆ ದೂರು ನೀಡಿದ್ದಾರೆ.

‘ವರ್ಟಿಕಾ ಅವರು ಫೆ. 1ರಂದು ದೂರು ನೀಡಿದ್ದಾರೆ. ಪತಿ ನಿತೀನ್ ಸುಭಾಷ್, ತಂದೆ ಸುಭಾಷ್ ಯೆವೊಲಾ, ಅಮೋಲ್ ಯೆವೊಲಾ, ಸುನೀತಾ ಯೆವೊಲಾ, ಸಚಿನ್, ಪ್ರಜಕ್ತಾ ಹಾಗೂ ಪ್ರದ್ಯಾ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘2009ನೇ ವೃಂದದ ಐಪಿಎಸ್ ಅಧಿಕಾರಿ ವರ್ಟಿಕಾ ಹಾಗೂ ಭಾರತೀಯ ವಿದೇಶಾಂಗ ಸೇವೆಯ (ಐಎಫ್‌ಎಸ್‌) ಅಧಿಕಾರಿ ನಿತೀನ್ ಸುಭಾಷ್ ಅವರ ಮದುವೆ 2011ರಲ್ಲಿ ನಡೆದಿತ್ತು. ನಿತೀನ್, ವಿಪರೀತವಾಗಿ ಧೂಮಪಾನ ಹಾಗೂ ಮದ್ಯಪಾನ ಮಾಡುತ್ತಿದ್ದರು.’

‘ಆರೋಗ್ಯಕ್ಕೆ ಹಾನಿಕಾರಕವಾದ ಧೂಮಪಾನ ಹಾಗೂ ಮದ್ಯಪಾನ ತ್ಯಜಿಸುವಂತೆ ವರ್ಟಿಕಾ ಅವರು ಪತಿಗೆ ಬುದ್ದಿವಾದ ಹೇಳಿದ್ದರು. ಅಷ್ಟಕ್ಕೇ ಕೋಪಗೊಂಡಿದ್ದ ನಿತೀನ್, ಜಗಳ ಮಾಡಲಾರಂಭಿಸಿದ್ದರು. 2016ರಲ್ಲಿ ವರ್ಟಿಕಾ ಮೇಲೆ ಹಲ್ಲೆ ಮಾಡಿದ್ದ ಪತಿ, ಅವರ ಕೈಗೆ ತೀವ್ರ ಗಾಯವನ್ನುಂಟು ಮಾಡಿದ್ದರು. ಈ ಸಂಗತಿ ದೂರಿನಲ್ಲಿದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

‘ವರ್ಟಿಕಾ ಅವರ ಮದುವೆ ಖರ್ಚುಗಳನ್ನು ಪೋಷಕರೇ ನೋಡಿಕೊಂಡಿದ್ದರು. ನನ್ನ ಅಜ್ಜಿಯಿಂದ ನಿತೀನ್, ₹ 5 ಲಕ್ಷದ ಚೆಕ್ ಪಡೆದಿದ್ದರು. ಮನೆ ನಿರ್ಮಾಣಕ್ಕಾಗಿ ₹ 35 ಲಕ್ಷ ಪಡೆದಿದ್ದರು. ಇಷ್ಟಾದರೂ ಪತಿ ಹಾಗೂ ಅವರ ಸಂಬಂಧಿಕರು ಮತ್ತಷ್ಟು ವರದಕ್ಷಿಣಿ ತರುವಂತೆ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ನೊಂದು ಠಾಣೆಗೆ ದೂರು ನೀಡಿರುವುದಾಗಿ ವರ್ಟಿಕಾ ತಿಳಿಸಿದ್ದಾರೆ’ ಎಂದೂ ಪೊಲೀಸ್‌ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT