ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ ಗಡಿನಾಡ ಘಟಕ: ನಾಲ್ವರ ನಾಮಪತ್ರ ತಿರಸ್ಕೃತ

Last Updated 9 ಏಪ್ರಿಲ್ 2021, 16:43 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಗಡಿನಾಡ ಘಟಕಕ್ಕೆ ಸ್ಪರ್ಧಿಸಿದವರಲ್ಲಿ ನಾಲ್ವರ ನಾಮಪತ್ರಗಳು ತಿರಸ್ಕೃತಗೊಂಡಿವೆ.

ಮೇ 9ಕ್ಕೆ ಪರಿಷತ್ತಿನ ರಾಜ್ಯಾಧ್ಯಕ್ಷ, ಜಿಲ್ಲಾ ಘಟಕಗಳ ಅಧ್ಯಕ್ಷ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಚುನಾವಣಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರ ನೇತೃತ್ವದಲ್ಲಿ ಗುರುವಾರ ನಾಮಪತ್ರಗಳ ಪರಿಶೀಲನೆ ನಡೆಸಲಾಗಿತ್ತು.ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ 22 ಮಂದಿಯ ನಾಮಪತ್ರವೂ ಸ್ವೀಕೃತಗೊಂಡಿದ್ದವು. ಅದೇ ರೀತಿ, ಕೇರಳ ಗಡಿನಾಡ ಘಟಕಕ್ಕೆ ಸ್ಪರ್ಧಿಸಿದ್ದ ಇಬ್ಬರ ನಾಮಪತ್ರಗಳು ಕ್ರಮಬದ್ಧವಾಗಿರುವುದಾಗಿ ಚುನಾವಣಾಧಿಕಾರಿ ಘೋಷಿಸಿದ್ದರು. ಆದರೆ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ಗಡಿನಾಡು ಘಟಕಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳ ನಾಮಪತ್ರದಲ್ಲಿ ಗೊಂದಲ ಇದ್ದ ಕಾರಣ ಸಮಜಾಯಿಷಿ ಕೇಳಿ, ಪತ್ರ ಕಳುಹಿಸಲಾಗಿತ್ತು.

ಶುಕ್ರವಾರ ಮತ್ತೊಮ್ಮೆ ಕೇರಳ ಹೊರತುಪಡಿಸಿ ಉಳಿದ ಗಡಿನಾಡು ಘಟಕಗಳಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ನಾಮಪತ್ರಗಳನ್ನು ಚುನಾವಣಾಧಿಕಾ ಪರಿಶೀಲನೆ ನಡೆಸಿದರು. ತಮಿಳುನಾಡು ಘಟಕಕ್ಕೆ ಸ್ಪರ್ಧಿಸಿದವರಲ್ಲಿ ಮಧು ಸಿ.ಸಿ. ಮತ್ತು ಬಿ.ಎಸ್. ವಿನಯ್ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಇದರಿಂದಾಗಿ ತಮಿಳ್ ಸೆಲ್ವಿ ಮಾತ್ರ ಸ್ಪರ್ಧೆಯಲ್ಲಿದ್ದು, ಅವರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ ಎನ್ನಲಾಗಿದೆ.

ಆಂಧ್ರ ಪ್ರದೇಶ ಗಡಿನಾಡ ಘಟಕಕ್ಕೆ ಕುಣೆ ಬಾಲರಾಜ್, ಎಚ್‌.ಬಿ. ಶಿವಕುಮಾರ್, ಅಂಜನ್ ಕುಮಾರ್, ಶಶಿಧರ್, ತಿಪ್ಪೇಸ್ವಾಮಿ ಜಿ.ಎಸ್., ಹನುಮಂತರಾಯ ಜಿ.ಕೆ. ಹಾಗೂ ಎಸ್‌.ಕೆ. ಜಯಶಂಕರ್ ಸ್ಪರ್ಧಿಸಿದ್ದರು. ಇವರಲ್ಲಿ ಎಚ್.ಬಿ. ಶಿವಕುಮಾರ್ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ತಿಪ್ಪೇಸ್ವಾಮಿ ಜಿ.ಎಸ್. ಮತ್ತು ಹನುಮಂತರಾಯ ಜಿ.ಕೆ. ಅವರು ನಾಮಪತ್ರ ಹಿಂತೆಗೆದುಕೊಂಡಿದ್ದಾರೆ.

ಮಹಾರಾಷ್ಟ್ರ ಗಡಿನಾಡ ಘಟಕಕ್ಕೆ ಸ್ಪರ್ಧಿಸಿದವರಲ್ಲಿ ಎಸ್‌.ಎಸ್. ಸಾಲೀಮಠ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಸೋಮಶೇಖರ ಜಮಶೆಟ್ಟಿ ಮತ್ತು ಮಲ್ಲಿಕಾಜೆಪ್ಪ ಸೋಮಶೇಖರ ಮಡ್ಡೆ ಸ್ಪರ್ಧೆಯಲ್ಲಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದವರಲ್ಲಿ ಯಾರು ಕೂಡ ನಾಮಪತ್ರವನ್ನು ಹಿಂತೆಗೆದುಕೊಂಡಿಲ್ಲ ಎಂದು ವಿಶೇಷ ಚುನಾವಣಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT