ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ ಬೈ–ಲಾ ತಿದ್ದುಪಡಿ: ಅಂತಿಮ ಕರಡು ಪ್ರತಿ ಸಲ್ಲಿಕೆ

Last Updated 17 ಮಾರ್ಚ್ 2022, 16:28 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಬೈ–ಲಾ ತಿದ್ದುಪಡಿಗೆ ಸಂಬಂಧಿಸಿದಂತೆಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ನೇತೃತ್ವದ ಸಮಿತಿಯು ಅಂತಿಮ ಕರಡು ಪ್ರತಿಯನ್ನು ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರಿಗೆ ಗುರುವಾರ ಸಲ್ಲಿಸಿದೆ.

ಪರಿಷತ್ತಿನ ಬೈ–ಲಾ ತಿದ್ದುಪಡಿಗೆ ಸಂಬಂಧಿಸಿದಂತೆ ಕಳೆದ ತಿಂಗಳು ಕಾರ್ಯಕಾರಿ ಸಮಿತಿ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಲಾಗಿತ್ತು.ಅಧಿಕಾರ ಕೇಂದ್ರೀಕರಣ, ಸದಸ್ಯತ್ವಕ್ಕೆ ಶೈಕ್ಷಣಿಕ ಮಾನದಂಡ ನಿಗದಿ ಸೇರಿದಂತೆ ಕೆಲ ಶಿಫಾರಸುಗಳಿಗೆ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಿಂದ ಆಕ್ಷೇಪಗಳು ಕೇಳಿ ಬಂದಿದ್ದವು. ಹೀಗಾಗಿ, ಅಂತಹ ನಿಯಮಗಳನ್ನು ಸಡಿಲಿಸುವುದಾಗಿ ಭರವಸೆ ನೀಡಿ, ಇನ್ನುಳಿದ ತಿದ್ದುಪಡಿಗೆ ಒಮ್ಮತದ ಅನುಮೋದನೆ ಪಡೆಯಲಾಗಿತ್ತು. ಈಗ ಸಲಹೆಗಳನ್ನು ಆಧರಿಸಿ, ಕೆಲ ಬದಲಾವಣೆಯೊಂದಿಗೆ ಸಮಿತಿ ಅಂತಿಮ ಪ್ರತಿ ನೀಡಿದೆ.

‘ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಉದ್ದೇಶ ಹಾಗೂ ಸ್ವರೂಪಕ್ಕೆ ಧಕ್ಕೆ ಬರದಂತೆ ನಿಬಂಧನೆಗಳನ್ನು ಆಮೂಲಾಗ್ರವಾಗಿ ಪರಿಶೀಲಿಸಿ, ಅವಶ್ಯಕತೆ ಇದ್ದಕಡೆ ಕೆಲವು ಬದಲಾವಣೆ ಮಾಡಲಾಗಿದೆ.ಪರಿಷತ್ತಿನ ವಿವಿಧ ಘಟಕಗಳ ಅಧ್ಯಕ್ಷರ ಸಲಹೆ ಅನುಸಾರ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆಯೂ ಕೆಲವು ಮಾರ್ಪಾಡು ಮಾಡಲಾಗಿದೆ’ ಎಂದು ನ್ಯಾ.ಅರಳಿ ನಾಗರಾಜ್ ತಿಳಿಸಿದರು.

ಪರಿಷ್ಕೃತ ಕರಡು ಪ್ರತಿಯನ್ನು ಸ್ವೀಕರಿಸಿ ಮಾತನಾಡಿದ ಕಸಾಪ ಅಧ್ಯಕ್ಷ ಮಹೇಶ ಜೋಶಿ, ‘ಸಮಿತಿ ಸದಸ್ಯರು ನಿಬಂಧನೆಯಲ್ಲಿ ಇರುವ ನ್ಯೂನತೆಗಳನ್ನು ಸರಿಪಡಿಸಲು ಸಾಕಷ್ಟು ಚರ್ಚೆಗಳನ್ನು ನಡೆಸಿ, ಸೂಕ್ತವಾದ ತಿದ್ದುಪಡಿಗಳನ್ನು ಸೇರಿಸಿದ್ದಾರೆ. ನಮ್ಮ ಮೂಲ ಉದ್ದೇಶ ಪರಿಷತ್ತನ್ನು ಜನ ಸಾಮಾನ್ಯರ ಪರಿಷತ್ತನ್ನಾಗಿಸುವುದಾಗಿದೆ. ತಿದ್ದುಪಡಿ ಪ್ರತಿಯನ್ನು ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಮಂಡಿಸಿ, ಅನುಮೋದನೆ ಪಡೆಯಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT