ಭಾನುವಾರ, ಸೆಪ್ಟೆಂಬರ್ 26, 2021
25 °C

ಯುವ ಕಥಾ ಸ್ಪರ್ಧೆಗೆ ಕಥೆಗಳ ಆಹ್ವಾನ: ವಿಳಾಸ, ಮತ್ತಿತರ ವಿವರಗಳು ಇಲ್ಲಿವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DH Photo

ಬೆಂಗಳೂರು: ‘ಅಕ್ಷರ ಸಂಗಾತ’ ತ್ರೈಮಾಸಿಕ ಸಾಹಿತ್ಯ ಪತ್ರಿಕೆಯು ಯುವ ಕಥಾ ಸ್ಪರ್ಧೆಗೆ 35 ವರ್ಷದೊಳಗಿನವರಿಂದ ಕಥೆಗಳನ್ನು ಆಹ್ವಾನಿಸಿದೆ. 

ಬಹುಮಾನಿತ ಕಥೆಗೆ ₹ 10 ಸಾವಿರ, ಒಪ್ಪಿತ ಎರಡು ಕಥೆಗಳಿಗೆ ತಲಾ ₹ 5 ಸಾವಿರ ನಗದು ಬಹುಮಾನವನ್ನು ಕೊಡಲಾಗುತ್ತದೆ. ಕಥೆಗಳಿಗೆ ಪದಗಳ ಮಿತಿಯಿಲ್ಲ. ಕಥೆಗಳು ಸಾಮಾಜಿಕ ಜಾಲತಾಣ ಸೇರಿದಂತೆ ಯಾವುದೇ ಮಾಧ್ಯಮದಲ್ಲಿ ‍ಪ್ರಕಟವಾಗಿರಬಾರದು. ಕಥೆಗಳು ನುಡಿ ತಂತ್ರಾಂಶದಲ್ಲಿರುವುದು ಕಡ್ಡಾಯ. ಜನ್ಮ ದಿನಾಂಕ ದೃಢೀಕರಣ ಪತ್ರದೊಂದಿಗೆ ಪರಿಚಯ, ಭಾವಚಿತ್ರ, ವಿಳಾಸವನ್ನು ಪ್ರತ್ಯೇಕ ಪುಟದಲ್ಲಿ ಲಗತ್ತಿಸಿರಬೇಕು.

ಕಥೆಗಳನ್ನು ಸೆ.30ರೊಳಗೆ sangaata2018@gmail.comಗೆ ಕಳುಹಿಸಿಕೊಡಬೇಕು. ಬಹುಮಾನಿತ ಕಥೆಗಳನ್ನು ‘ಅಕ್ಷರ ಸಂಗಾತ’ ತ್ರೈಮಾಸಿಕ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ಸಂಪಾದಕ ಟಿ.ಎಸ್. ಗೊರವರ ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.