ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ವರ್ತನೆ ಬಗ್ಗೆ ಗೋವಿಂದ ಕಾರಜೋಳ ವ್ಯಂಗ್ಯ

Last Updated 5 ಜುಲೈ 2021, 12:22 IST
ಅಕ್ಷರ ಗಾತ್ರ

ಬಾಗಲಕೋಟೆ: ’ಮುಂದಿನ ಸಿಎಂ ಯಾರು ಎಂಬ ವಿಚಾರದಲ್ಲಿ ರಾಜ್ಯದ ಕಾಂಗ್ರೆಸ್‌ ನಾಯಕರ ವರ್ತನೆ ಮದುವೆ ಆಗೋದಕ್ಕೆ ಮುಂಚೆಯೇ ಮಕ್ಕಳನ್ನು ಹಡೆಯಬೇಕು ಎಂಬಂತಾಗಿದೆ‘ ಎಂದು ಸೋಮವಾರ ಇಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಛೇಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಚುನಾವಣೆಯೇ ಇಲ್ಲ. ಚುನಾವಣೆಗೆ ದಿನಾಂಕವೇ ನಿಗದಿಯಾಗಿಲ್ಲ. ವೇಳಾಪಟ್ಟಿಯೂ ಬಂದಿಲ್ಲ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಆಗಲು ಓಡಾಡುವುದು ಎಷ್ಟು ಪ್ರಸ್ತುತ‘ ಎಂದು ಪ್ರಶ್ನಿಸಿದರು.

’ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಕಾಂಗ್ರೆಸ್‌ನವರು ಮೊದಲು ಚುನಾವಣೆಯಲ್ಲಿ ಗೆದ್ದು ಬರಲಿ. 113 ಸ್ಥಾನ ಗಳಿಸಲಿ. ಆನಂತರ ಮುಖ್ಯಮಂತ್ರಿ ಯಾರಾಗಬೇಕು ಎಂದು ನಿರ್ಧಾರ ಅಗುತ್ತದೆ. ಆದರೆ ಇನ್ನೂ ಎರಡು ವರ್ಷ ಮುಂಚೆಯೇ ಐದು ಗುಂಪುಗಳಾಗಿ ಆ ಪಕ್ಷದ ನಾಯಕರು ಹೋರಾಟ, ಹೊಡೆದಾಟ, ಒಬ್ಬರಿಗೊಬ್ಬರು ಪೈಪೋಟಿ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್‌ನ ಅವಸಾನದ ಮುನ್ಸೂಚನೆ‘ ಎಂದು ಹೇಳಿದರು.

’ದಸರಾ ಅಂಬಾರಿ ಆನೆಯೇ ಹೊರಬೇಕು. ಮರಿಯಾನೆಯಲ್ಲ‘ ಎಂಬ ಸಚಿವ ಸಿ.ಪಿ.ಯೋಗೀಶ್ವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾರಜೋಳ, ’ಯಡಿಯೂರಪ್ಪ ಅಧಿಕಾರ ವಹಿಸಿಕೊಂಡ ನಂತರ ಸಿಎಂ ಹುದ್ದೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಾರೆ. ಎರಡು ವರ್ಷಗಳಿಂದ ಉತ್ತಮ ಆಡಳಿತ ನೀಡಿದ್ದಾರೆ. ಮುಂದಿನ ಎರಡು ವರ್ಷಗಳ ಅವಧಿಗೆ ಅವರೇ ಮುಂದುವರೆಯಲಿದ್ದಾರೆ. ಕರ್ನಾಟಕದ ಸಿಎಂ ಬದಲಾವಣೆ ಮಾಡುವ ಯಾವುದೇ ಅಜೆಂಡಾ ಪಕ್ಷದ ರಾಷ್ಟ್ರೀಯ ನಾಯಕರ ಮುಂದೆ ಇಲ್ಲ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT