ಶುಕ್ರವಾರ, ಜುಲೈ 1, 2022
22 °C

ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೋಮುವಾದ: ಆತಂಕ ಹೊರಹಾಕಿದ ಕಿರಣ್ ಮಜುಂದಾರ್ ಶಾ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೆಚ್ಚುತ್ತಿರುವ ಕೋಮುವಾದದಿಂದ ಕರ್ನಾಟಕಕ್ಕೆ ಕಾದಿರುವ ಅಪಾಯದ ಕುರಿತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಆತಂಕ ಹೊರಹಾಕಿದ್ದಾರೆ. 

ಐಟಿಬಿಟಿ ಕ್ಷೇತ್ರಗಳಲ್ಲಿ ಕೋಮುವಾದ ಬೆಳೆದರೆ, ಅದು ನಮ್ಮ ಜಾಗತಿಕ ನಾಯಕತ್ವವನ್ನು ನಾಶಮಾಡಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. 

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಶಾ, ‘ಎಲ್ಲ ಸಮುದಾಯದವರನ್ನೂ ಒಳಗೊಂಡಿರುವ ಆರ್ಥಿಕ ಅಭಿವೃದ್ಧಿಯನ್ನು ಕರ್ನಾಟಕವು ರೂಪಿಸಿದೆ. ಇಲ್ಲಿ ಕೋಮುವಾದಕ್ಕೆ ಅನುಮತಿ ನೀಡಬಾರದು’ ಎಂದು ತಿಳಿಸಿದ್ದಾರೆ. 

‘ಒಂದು ವೇಳೆ, ಐಟಿಬಿಟಿ ಕ್ಷೇತ್ರಗಳಲ್ಲಿ ಕೋಮುವಾದ ಬೆಳೆದರೆ, ಅದು ನಮ್ಮ ಜಾಗತಿಕ ನಾಯಕತ್ವವನ್ನು ನಾಶಮಾಡಲಿದೆ. ಬಸವರಾಜ ಬೊಮ್ಮಾಯಿಯವರೇ, ದಯವಿಟ್ಟು ಕೋಮುಗಳ ನಡುವಿನ ವಿಭಜನೆಯನ್ನು ತಡೆಯಿರಿ’ ಎಂದು ಶಾ ಒತ್ತಾಯಿಸಿದ್ದಾರೆ. 

ಇದೇ ವೇಳೆ, ಹಲಾಲ್‌ ಕುರಿತು ವ್ಯಕ್ತಿಯೊಬ್ಬರ ಕಾಮೆಂಟ್‌ಗೆ ಪ್ರತಿಕ್ರಿಯಿಸಿರುವ ಶಾ, ‘ಗಲ್ಫ್ ರಾಷ್ಟ್ರಗಳಿಗೆ ಮಾಂಸವನ್ನು ರಫ್ತು ಮಾಡಲು ಹಲಾಲ್‌ನ ಪ್ರಮಾಣ ಪತ್ರದ ಅವಶ್ಯಕತೆ ಇದೆ. ಆದರಿಂದ, ರಫ್ತು ಮಾಡುವುದನ್ನೇ ಬಿಡಿ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಲಾಲ್‌ ಕುರಿತು ಸರ್ಕಾರದ ನಿಲುವು ಸ್ಪಷ್ಟಪಡಿಸಲು ಸಿಎಂ ನಕಾರ

ಹಿಜಾಬ್‌ ಸಂಘರ್ಷ, ಮುಸ್ಲಿಮರ ಅಂಗಡಿಗಳಿಗೆ ನಿಷೇಧ ಹಾಗೂ ಹಲಾಲ್‌ಗೆ ವಿರೋಧದಂತಹ ಬೆಳವಣಿಗಳನ್ನು ಒಳಗೊಂಡಿರುವ ‘ದಿ ಇಂಡಿಯನ್‌ ಎಕ್ಸಪ್ರೆಸ್‌’ ವರದಿಯನ್ನು ಶಾ ಅವರು ತಮ್ಮ ಟ್ವೀಟ್‌ ಜೊತೆ ಹಂಚಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು