ಸೋಮವಾರ, ಜುಲೈ 26, 2021
26 °C

ಶಾಸಕರು ದೆಹಲಿಗೆ ಹೋದರೆ ತಪ್ಪೇನು: ನಳೀನ್ ಕುಮಾರ್ ಕಟೀಲ್ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಪಕ್ಷದ ಶಾಸಕರು ದೆಹಲಿಗೆ ವಿವಿಧ ಕೆಲಸಗಳಿಗಾಗಿ ಹೋಗುತ್ತಾರೆ. ಅವರು ಹೋದರೆ ತಪ್ಪೇನು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪ್ರಶ್ನಿಸಿದರು.

ಬೀದರ್ ಗೆ ತೆರಳುವ ಮುನ್ನ ನಗರದ ವಿಮಾನ ನಿಲ್ದಾಣದಲ್ಲಿ ಗುರುವಾರ ಮಾತನಾಡಿದ ಅವರು, ಸದ್ಯಕ್ಕೆ ಬಿಜೆಪಿಯಲ್ಲಿ ಯಾವುದೇ ಗೊಂದಲಗಳಿಲ್ಲ ಎಂದರು‌.

ಅಧಿವೇಶನದ ವೇಳೆಗೆ ಮುಖ್ಯಮಂತ್ರಿ ಅವರು ದೆಹಲಿಗೆ ಹೋಗುವ ಪರಿಪಾಠವಿದೆ. ಹೀಗಾಗಿ ಹೋಗುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಅವರ ವಿವೇಚನೆಗೆ ಬಿಟ್ಟದ್ದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಜಗತ್ತಿನಲ್ಲಿ ಅತಿ ಹೆಚ್ಚು ಲಸಿಕೆ ನೀಡಿದ ದೇಶ ಭಾರತ. ಎಲ್ಲಾ ಕಡೆ ಲಸಿಕೆ ಇದೆ, ಇದೀಗ ಐದು ಕಂಪನಿಗಳು ಲಸಿಕೆ ನೀಡುತ್ತಿವೆ. ಡಿಸೆಂಬರ್ ನೊಳಗಾಗಿ ಎಲ್ಲರಿಗೂ ‌ಲಸಿಕೆ ನೀಡುವ ಗುರಿ ಹೊಂದಲಾಗಿದೆ ‌ಎಂದರು.

ರಾಜ್ಯದಲ್ಲಿ ಚುನಾವಣೆಗೆ ಇನ್ನೂ ಎರಡು ವರ್ಷವಿದೆ. ಆದರೆ ಈಗಲೇ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹುದ್ದೆಗೆ‌ ಸ್ಪರ್ಧೆ ನಡೆದಿದೆ. ಸಿ.ಎಂ. ಹುದ್ದೆಗೆ ಸಂಗೀತ ಖುರ್ಚಿ ಆಟ ಜೋರಾಗಿ ನಡೆದಿದೆ. ಸಿದ್ದರಾಮಯ್ಯ ರಾಜ್ಯದ ಜನರಿಗೆ ಬಹುದೊಡ್ಡ ವಂಚನೆ ಮಾಡಿದ್ದಾರೆ ಮೊದಲು ಅಹಿಂದದ ಹೆಸರು ಹೇಳಿ ಸಿ.ಎಂ. ಆದರು. ನಂತರ ಆ ಸಮುದಾಯವನ್ನು ‌ಮರೆತುಬಿಟ್ಟರು ಎಂದು ಕಟೀಲ್ ಟೀಕಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು