ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Live: ಉಪ ಚುನಾವಣೆ ಫಲಿತಾಂಶ | ಬೆಳಗಾವಿ ಲೋಕಸಭೆ, ಬಸವಕಲ್ಯಾಣ ವಿಧಾನಸಭೆಯಲ್ಲಿ ಬಿಜೆಪಿ ಪಾರುಪತ್ಯ, ಮಸ್ಕಿ ವಿಧಾನಸಭೆ ‘ಕೈ’ ವಶ
LIVE

ಬೆಳಗಾವಿ/ ರಾಯಚೂರು/ಬೀದರ್‌: ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತ ಎಣಿಕೆ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಬೆಳಿಗ್ಗೆ 8ರಿಂದ ಆರಂಭವಾಗಿದೆ.
Last Updated 2 ಮೇ 2021, 16:01 IST
ಅಕ್ಷರ ಗಾತ್ರ
16:0102 May 2021

ಬೆಳಗಾವಿ ಲೋಕಸಭೆ, ಬಸವಕಲ್ಯಾಣ ವಿಧಾನಸಭೆಯಲ್ಲಿ ಬಿಜೆಪಿ ಪಾರುಪತ್ಯ , ಮಸ್ಕಿ ವಿಧಾನಸಭೆ ‘ಕೈ’ ವಶ

14:4102 May 2021

5240 ಮತಗಳ ಅಂತರದಿಂದ ಬಿಜೆಪಿಯ ಮಂಗಲಾ ಅಂಗಡಿ ಅವರಿಗೆ ಗೆಲುವು

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ವಿಜೇತರಾದ ಬಿಜೆಪಿಯ ಮಂಗಲಾ ಸುರೇಶ ಅಂಗಡಿ ಅವರಿಗೆ ಜಿಲ್ಲಾ ಚುನಾವಾಧಿಕಾರಿ ಪ್ರಮಾಣಪತ್ರ ವಿತರಿಸಿದರು

12:1702 May 2021

ಬಿಜೆಪಿಯ ಮಂಗಲಾ ಅಂಗಡಿ ಅವರಿಗೆ 4123 ಮತಗಳಿಂದ ಮುನ್ನಡೆ.

11:3902 May 2021

59ಸಾವಿರ ಮತಗಳ ಎಣಿಕೆಯಷ್ಟೆ ಬಾಕಿ

59ಸಾವಿರ ಮತಗಳ ಎಣಿಕೆಯಷ್ಟೆ ಬಾಕಿ ಇದೆ. ಕೊನೆ ಕ್ಷಣದಲ್ಲಿನ ಬೆಳವಣಿಗೆಗಳು ಕುತೂಹಲಕ್ಕೆ ಕಾರಣವಾಗಿವೆ. ಈ ಕ್ಷೇತ್ರದಲ್ಲಿ ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ 4 ಲಕ್ಷ ಮಿಕ್ಕಿ ಮತ ಗಳಿಸಿದ್ದು ಇದೇ ಮೊದಲಾಗಿದೆ. 

11:2702 May 2021

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸಿದೆ.

ಬಿಜೆಪಿ- ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಕಂಡುಬರುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಮುನ್ನಡೆಯಲ್ಲಿ ಇಳಿಕೆ ಕಂಡುಬರುತ್ತಿದೆ. ಒಮ್ಮೊಮ್ಮೆ ಏರಿಕೆ ಆಗುತ್ತಿದೆ. ಹೀಗಾಗಿ ಗೆಲುವಿನ ಮಾಲೆ ಯಾರಿಗೆ ಸಿಗಲಿದೆ ಎನ್ನುವುದು ಕುತೂಹಲ ಮೂಡಿಸುತ್ತಿದೆ.

77 ನೇ ಸುತ್ತು ಮುಕ್ತಾಯ

ಕಾಂಗ್ರೆಸ್ ಮುನ್ನಡೆ-1972

ಬಿಜೆಪಿ-407679

ಕಾಂಗ್ರೆಸ್ -409651

10:5902 May 2021

ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ 4060 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಮುಂದುವರಿದಿದ್ದು, ಸಂಜೆ 4.16ರ ಸುಮಾರಿಗೆ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ 4060 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

10:3702 May 2021

ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ 10676 ಮತಗಳ ಮುನ್ನಡೆ

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ- ಮಧ್ಯಾಹ್ನ 3.24ರ ಸುಮಾರಿಗೆ
ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ 10676 ಮತಗಳ ಮುನ್ನಡೆ ಕಂಡುಕೊಂಡಿದ್ದಾರೆ

09:5302 May 2021

ಮಸ್ಕಿ: 30,606 ಮತಗಳಿಂದ ಕಾಂಗ್ರೆಸ್ ಗೆಲುವು

ರಾಯಚೂರು: ಜಿಲ್ಲೆಯ ಮಸ್ಕಿ‌ ವಿಧಾನಸಭೆ ಉಪ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಅವರು 30,606 ಮತಗಳ ಅಂತರದೊಂದಿಗೆ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಅವರಿಗೆ 55,731 ಮತಗಳನ್ನು ಪಡೆದಿದ್ದರೆ, ಬಸನಗೌಡ ಅವರಿಗೆ 86,337 ಮತಗಳು ಬಂದಿವೆ.

09:1802 May 2021

ಮಧ್ಯಾಹ್ನ 2.45ರ ವೇಳೆಗೆ: ಬೆಳಗಾವಿ– 9,859 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಮುಂದುವರಿದಿದ್ದು ಮಧ್ಯಾಹ್ನ 2.40ರ ವೇಳೆಗೆ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ 9,248 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಬಿಜೆಪಿಯ ಮಂಗಲಾ ಅಂಗಡಿ 279859 ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಸತೀಶ ಜಾರಕಿಹೊಳಿ 2,89,107 ಮತಗಳನ್ನು ಪಡೆದಿದ್ದಾರೆ. ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನಾ ಬೆಂಬಲಿತ ಅಭ್ಯರ್ಥಿ ಶುಭಂ ಶೆಳಕೆ 86,894 ಮತಗಳನ್ನು ಗಳಿಸಿದ್ದಾರೆ.

09:0902 May 2021

ಮಧ್ಯಾಹ್ನ 2.20ರ ವೇಳೆಗೆ– ಬೆಳಗಾವಿ ಲೋಕಸಭಾ ಉಪಚುನಾವಣೆ ಮತ ಎಣಿಕೆ: 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿದ್ದು, ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಮುನ್ನಡೆ ಗಳಿಸಿದ್ದಾರೆ. ಎರಡರಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅವರು ಬೆಳಗಾವಿ ದಕ್ಷಿಣ ಹಾಗೂ ಗೋಕಾಕ ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಮುಂದಿದ್ದಾರೆ.

ಉಳಿದಂತೆ ಅರಭಾವಿ, ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ಬೈಲಹೊಂಗಲ, ಸವದತ್ತಿ- ಯಲ್ಲಮ್ಮ ಹಾಗೂ ರಾಮದುರ್ಗದಲ್ಲಿ ಕಾಂಗ್ರೆಸ್ ಮುನ್ನಡೆ ಕಂಡಿದೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗಿಂತಲೂ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಾಗೂ ಶಿವಸೇನಾ ಬೆಂಬಲಿತ ಅಭ್ಯರ್ಥಿ ಶುಭಂ ಶೆಳಕೆ ಹೆಚ್ಚು ಮತಗಳನ್ನು (ಈವರೆಗೆ ) ಪಡೆದಿದ್ದಾರೆ. 

ಈ ವೇಳೆ ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ 264187 ಹಾಗೂ ಬಿಜೆಪಿಯ ಮಂಗಲಾ ಅಂಗಡಿ 256824 ಮತಗಳನ್ನು ಗಳಿಸಿದ್ದಾರೆ. ಸತೀಶ 7363 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಅಂತರವು ಐದಂಕಿಯಿಂದ ನಾಲ್ಕಂಕಿಗೆ ಇಳಿಕೆಯಾಗಿದೆ.