ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರದ ಕೋವಿಡ್ ಲಸಿಕೆ ನೀತಿ ವಿಫಲ: ಕಾಂಗ್ರೆಸ್ ಆರೋಪ

ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರದ ಕೋವಿಡ್ ಲಸಿಕೆ ವಿತರಣೆ ನೀತಿಯು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ಟೀಕಿಸಿದ್ದು, ರಾಜ್ಯವಾರು ಲಸಿಕೆ ಹಂಚಿಕೆಯ ಅಂಕಿಅಂಶವನ್ನು ಮುಚ್ಚಿಟ್ಟಿದೆ ಎಂದುಆರೋಪಿಸಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿದ್ದು, 'ಲಸಿಕೆ ನೀಡುವ ಜವಾಬ್ದಾರಿಯನ್ನ ಕೇಂದ್ರ ಸರ್ಕಾರ ವಹಿಸಿಕೊಂಡ ನಂತರ ಶೇಕಡಾ 60ರಷ್ಟು ಕುಸಿತದಿಂದ ಲಸಿಕೆ ವಿತರಣೆಯು ಇನ್ನಷ್ಟು ಹಳ್ಳ ಹಿಡಿದಿದೆ. ತಾರತಮ್ಯ ಮುಚ್ಚಿಡಲು ರಾಜ್ಯವಾರು ಲಸಿಕೆ ಹಂಚಿಕೆಯ ಅಂಕಿ ಅಂಶವನ್ನು ಮುಚ್ಚಿಟ್ಟಿದೆ. ರಾಜ್ಯದಲ್ಲಿ ಲಸಿಕೆಗಳಿಗೆ ತೀವ್ರ ಕೊರತೆ ಇದ್ದರೂ ಕರ್ನಾಟಕದ ಬಿಜೆಪಿಯು ಬಾಯಿಗೆ ಬೀಗ ಹಾಕಿಕೊಂಡಿದೆ' ಎಂದು ಆರೋಪಿಸಿದೆ.

ಕೋವಿಡ್ ಲಸಿಕೆ ವಿತರಣೆ ನೀತಿಯಲ್ಲಿ ಬಿಜೆಪಿ ಸರ್ಕಾರದ ವೈಫಲ್ಯದ ಕುರಿತಾಗಿ ಕಾಂಗ್ರೆಸ್ ಎಳೆ ಎಳೆಯಾಗಿ ಬಿಚ್ಚಿಟ್ಟಿದೆ. 'ಒಂದನೇ ಡೋಸ್ ಪಡೆದವರಿಗೆ 2ನೇ ಡೋಸ್ ಇಲ್ಲ, ವಿದ್ಯಾರ್ಥಿಗಳಿಗೆ ಲಸಿಕೆ ಸಿಗ್ತಿಲ್ಲ, ಲಸಿಕೆ ಪಡೆಯದ ಮುಂಚೂಣಿ ಆರೋಗ್ಯ ಕಾರ್ಯಕರ್ತರು ಹಲವರಿದ್ದಾರೆ, 45 ವರ್ಷಕ್ಕೂ ಅಧಿಕ ಪ್ರಾಯದ ಇನ್ನೂ ಹಲವರಿಗೆ ಲಸಿಕೆ ಸಿಕ್ಕಿಲ್ಲ, ಕೆಲಸಕ್ಕೆ ತೆರಳುವ ನೌಕರರಿಗೆ ಲಸಿಕೆ ಇಲ್ಲ, ಹೀಗಿದ್ದರೂ ಈ ಸರ್ಕಾರಕ್ಕೆ ಪ್ರಚಾರದಲ್ಲಿರುವ ಆಸಕ್ತಿ ಲಸಿಕೆ ನೀಡುವಿಕೆಯಲ್ಲಿ ಇಲ್ಲ' ಎಂದು ದೂಷಿಸಿದೆ.

'ಲಸಿಕೆಯನ್ನು ರಫ್ತು ಮಾಡಿ ಭಾರತೀಯರಿಗೆ ಮೋಸ ಮಾಡಿತು ಬಿಜೆಪಿ ಸರ್ಕಾರ. ನಂತರ ಲಸಿಕೆಯನ್ನ ರಾಜ್ಯ ಸರ್ಕಾರಗಳಿಗೆ ವ್ಯಾಪಾರಕ್ಕಿಟ್ಟಿತು, ತದಾನಂತರ ಲಸಿಕೆ ಜವಾಬ್ದಾರಿಯನ್ನ ರಾಜ್ಯಗಳ ತಲೆಗೆ ಹೊರಿಸಿತು. ಸುಪ್ರೀಂ ತಪರಾಕಿಯ ನಂತರ ಮತ್ತೆ ಉಚಿತವೆಂದು ಪ್ರಚಾರಕ್ಕೆ ಬಳಸಿಕೊಂಡಿತು. ಇದು ಪ್ರಧಾನಿ ನರೇಂದ್ರ ಮೋದಿ ಅವರ ವಿಫಲ ಲಸಿಕೆ ನೀತಿಗೆ ಸಾಕ್ಷಿ' ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT