ಶನಿವಾರ, ಜುಲೈ 24, 2021
23 °C

Covid-19 Karnataka Updates: ರಾಜ್ಯದಲ್ಲಿ 1,990 ಹೊಸ ಪ್ರಕರಣಗಳು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಕೋವಿಡ್‌–19 ಕಾರಣಗಳಿಂದಾಗಿ 45 ಜನ ಮೃತಪಟ್ಟಿದ್ದಾರೆ. ಇದೇ ಅವಧಿಯಲ್ಲಿ 1,990 ಹೊಸ ಪ್ರಕರಣಗಳು ವರದಿಯಾಗಿವೆ.

ರಾಜ್ಯದಲ್ಲಿ ದೃಢಪಟ್ಟ ಪ್ರಕರಣಗಳ ದರ ಶೇ.1.59ಕ್ಕೆ ಇಳಿಕೆಯಾಗಿದೆ‌. ಬುಧವಾರ 2,537 ಮಂದಿ ಗುಣಮುಖರಾಗಿರುವುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆಯಿಂದ ತಿಳಿದು ಬಂದಿದೆ.

ರಾಜ್ಯದಲ್ಲಿ ಇಲ್ಲಿಯವರೆಗೆ ಮಾರಕ ಸೋಂಕಿಗೆ 35,989 ಜನ ಸಾವಿಗೀಡಾಗಿದ್ದು, ಮರಣದ ಶೇಕಡಾವಾರು ಪ್ರಮಾಣ 2.26ರಷ್ಟಿದೆ. ಒಟ್ಟು ಕೋವಿಡ್ ದೃಢ ಪ್ರಕರಣಗಳ ಸಂಖ್ಯೆ  28,76,587ಕ್ಕೆ ಏರಿಕೆಯಾಗಿದ್ದು, ಈ ಪೈಕಿ 28,06,933 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಕೊರೊನಾದ ಹೊಸ ರೂಪಾಂತರ ವೈರಸ್‌ಗಳಾದ ‌ಆಲ್ಪಾ ಬಿ.1.1.7 ಪ್ರಕರಣಗಳ ಸಂಖ್ಯೆ 140 ರಷ್ಟು ಕಂಡು ಬಂದಿದೆ. ಬೀಟಾ 6 ಜನರಲ್ಲಿ, ಡೆಲ್ಟಾ 725 ಜನರಲ್ಲಿ ಡೆಲ್ಟಾ ಪ್ಲಸ್ 3 ಜನರಲ್ಲಿ ಮತ್ತು 145 ಜನರಲ್ಲಿ ಕಪ್ಪಾ ಕಂಡು ಬಂದಿದೆ.

ಬೆಂಗಳೂರಿನಲ್ಲಿ 400 ಜನರಲ್ಲಿ ಕೊರೊನಾ ವೈರಸ್‌ ಸೋಂಕು ಪತ್ತೆಯಾಗಿದೆ, 8 ಜನ ಮೃತಪಟ್ಟಿದ್ದಾರೆ. ಮೈಸೂರಿನಲ್ಲಿ 211, ದಕ್ಷಿಣ ಕನ್ನಡದಲ್ಲಿ 219, ಬೆಳಗಾವಿಯಲ್ಲಿ 140 ಹಾಗೂ ಉಡುಪಿಯಲ್ಲಿ 120  ಪ್ರಕರಣಗಳು ದಾಖಲಾಗಿವೆ.

 

ಇದನ್ನೂ ಓದಿ: ಹೊರ ರಾಜ್ಯಗಳಿಂದ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ: ಸಚಿವ ಸುಧಾಕರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು