ಬೆಂಗಳೂರು: ರಾಜ್ಯಕ್ಕೆ ಆಮ್ಲಜನಕ ಹಂಚಿಕೆಯ ಪಾಲನ್ನು (ಕೋಟಾ) ಪ್ರತಿದಿನ 1,200 ಟನ್‌ಗಳಷ್ಟು ಪೂರೈಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹೈಕೋರ್ಟ್ ನಿರ್ದೇಶನದ ಹೊರತಾಗಿಯೂ ರಾಜ್ಯದಲ್ಲಿ ಆಮ್ಲಜನಕ ಕೊರತೆ ಎದುರಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯಕ್ಕೆ ಮೇ 30ರಂದು 545.85 ಟನ್, ಮೇ 29 ರಂದು 791.85 ಟನ್, ಮೇ 28 ರಂದು 686 ಟನ್, ಮೇ 27 ರಂದು 730 ಟನ್, ಮೇ 26 ರಂದು 875.07 ಟನ್ ಮತ್ತು ಮೇ 24 ರಂದು 728 ಟನ್ ಆಮ್ಲಜನಕ ಬಂದಿದೆ.

ರಾಜ್ಯದ ಎಂಟು ಆಮ್ಲಜನಕ ಘಟಕಗಳಲ್ಲಿ ನಿರಂತರವಾಗಿ ಆಮ್ಲಜನಕ ಉತ್ಪಾದಿಸಿದರೂ ಕೂಡ ಅಗತ್ಯದಷ್ಟು ಬೇಡಿಕೆ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ರಾಜ್ಯದಲ್ಲಿ ದೈನಂದಿನ ಸೋಂಕು ಪ್ರಕರಣಗಳು ಇಳಿಮುಖವಾಗಿವೆ. ಸೋಮವಾರ 16,604 ಹೊಸ ಪ್ರಕರಣಗಳು ದಾಖಲಾಗಿದ್ದು, 411 ಮಂದಿ ಮೃತಪಟ್ಟಿದ್ದರು. ಸದ್ಯ 3.14 ಲಕ್ಷ ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ... 'ಆ್ಯಂಫೊಟೆರಿಸಿನ್–ಬಿ' ರಫ್ತು ನಿರ್ಬಂಧಿಸಿದ ಕೇಂದ್ರ ಸರ್ಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.